ಸುದ್ದಿಮೂಲ ವಾರ್ತೆ
ಜೂನ್,11:ಐತಿಹಾಸಿಕ ಪಾಕ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುವ ಸ್ಪರ್ಧೆ ಹಳೆಯ ಕಳೆದುಹೋದ ಹಳ್ಳಿಯ ಪಾಕ ವಿಧಾನಗಳ ಸ್ಪರ್ಧೆ ಪಾಕಶಾಲೆ ಸ್ಪರ್ಧೆಗೊಂದು ಸುಂದರವಾದ ವೇದಿಕೆ ಅಭೂತಪೂರ್ವ ಶೆಫ್ ಸವಾಲು ಮುಂದಿನ ತಲೆಮಾರಿನ ಪಾಕಶಾಲೆ ಪ್ರತಿಭಾನ್ವಿತರ ಕಲಾ ಸಾಮರ್ಥ್ಯಕ್ಕೆ ವೇದಿಕೆ
‘ವರ್ಲ್ಡ್ ಆಫ್ ಹಾಸ್ಪಿಟಾಲಿಟಿ’ ಯಿಂದ ಇನ್ಕ್ರೆಡಿಬಲ್ ಚೆಫ್ ಚಾಲೆಂಜ್ 2023 ಸ್ಪರ್ಧೆ ಭಾರತದ ವೃತ್ತಿಪರ ಶೆಫ್ ಗಳನ್ನು, ಆತಿಥ್ಯ ಕ್ಷೇತ್ರದ ತಜ್ಞರನ್ನು, ಆಹಾರ ಸೇವೆ ಉತ್ಪನ್ನಗಳನ್ನು ಒಂದೇ ವೇದಿಕೆಯಡಿ ತರುತ್ತದೆ. ‘ವರ್ಲ್ಡ್ ಆಫ್ ಹಾಸ್ಪಿಟಾಲಿಟಿ’ ಲೈವ್ ಶೆಫ್ ಸ್ಪರ್ಧೆಯನ್ನು ಅನಾವರಣಗೊಳಿಸಲು ಮುಂದಾಗಿದೆ.
ದಕ್ಷಿಣ ಭಾರತ ಪಾಕಶಾಲೆ ಸಂಸ್ಥೆ ಸಹಯೋಗದಲ್ಲಿ ಈ ಪ್ರತಿಷ್ಠಿತ ಪಾಕಶಾಲೆ ಕಲಾಸ್ಪರ್ಧೆ ನಡೆಯಲಿದ್ದು, ಬೆಂಗಳೂರಿನ ಆಹಾರ ಸೇವಾ ವಲಯದ 250 ಕ್ಕೂ ಹೆಚ್ಚು ರಾಷ್ಟ್ರಾದ್ಯಂತ ವೃತ್ತಿಪರ ಶೆಫ್ಗಳು ತಮ್ಮ ಪಾಕಶಾಲೆ ಕಲೆಯನ್ನು ಪ್ರದರ್ಶಿಸಲು ಮುಂದಾಗಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಮೈದಾನದಲ್ಲಿ ಜೂನ್ 13 ರಿಂದ 15 ರವರೆಗೆ ನೆರವೇರಲಿದೆ.
ಈ ಸ್ಪರ್ಧೆಯು ನಗರದಲ್ಲಿನ ಹಲವಾರು ಬಾಣಸಿಗರಿಗೆ ತಮ್ಮ ಕೌಶಲ್ಯಕ್ಕಾಗಿ ಮಾನ್ಯತೆ ಪಡೆಯಲು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಬಾಣಸಿಗ ತೀರ್ಪುಗಾರರ ಸಮಿತಿಯಿಂದ ವಿವರವಾದ ವಿಮರ್ಶೆ, ಪ್ರತಿಕ್ರಿಯೆಯನ್ನು ಆಲಿಸುವ ಅವಕಾಶ ಮತ್ತು ವೇದಿಕೆಯನ್ನು ಕಲ್ಪಿಸುವುದರಿಂದ ಹೆಚ್ಚು ಬೇಡಿಕೆಯಿರುವ ವೇದಿಕೆಯಾಗಿದೆ.
ಇಂದು ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳು ಕ್ಷಿಪ್ರಗತಿಯಿಂದ ರೂಪಾಂತರವಾಗುತ್ತಿರುವಾಗ ಪಾಕಶಾಲೆ ಕಲೆಯು ಕೂಡ ಆಯಾ ಸಮಯಕ್ಕೆ ತಕ್ಕಂತೆ ಆಹಾರ ಪ್ರಿಯರ ಅಗತ್ಯಗಳನ್ನು ಈಡೇರಿಸುವ ವೇದಿಕೆಯಾಗಬೇಕಾಗುತ್ತದೆ. ಆಹಾರ ತಯಾರಿ ಕ್ಷೇತ್ರದಲ್ಲಿ ಸೃಜನಶೀಲತೆ, ಸಂಶೋಧನೆ ಆಹಾರೋದ್ಯಮದಲ್ಲಿ ಬೇಡಿಕೆಯನ್ನು ಸೃಷ್ಟಿಸುವಂತೆ ಮಾಡುತ್ತದೆ. ಇತ್ತೀಚಿನ ಕೆಲವು ವಿದ್ಯಮಾನಗಳನ್ನು ನೋಡಿದರೆ ಆಹಾರ ಬಾಣಸಿಗರು ಪರಿಮಿತಿಯನ್ನು ಮೀರಿ ಹೊಸ ಹೊಸ ತಿಂಡಿ ತಿನಿಸುಗಳನ್ನು ಗ್ರಾಹಕರ ತಟ್ಟೆಗೆ ಉಣಬಡಿಸುವಲ್ಲಿ ವೃತ್ತಿನೈಪುಣ್ಯತೆ ಮೆರೆಯುವುದನ್ನು ಕಾಣಬಹುದು.
ಕೆಲವರು ಐತಿಹಾಸಿಕ ಪಾಕ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಹಳೆಯ ಕಳೆದುಹೋದ ಹಳ್ಳಿಯ ಪಾಕವಿಧಾನಗಳ ಮೇಲೆ ಕೇಂದ್ರೀಕರಿಸುತ್ತಾರೆ. ಇನ್ನು ಕೆಲವು ಆಹಾರ ತಜ್ಞರು ತಮ್ಮದೇ ಆದ ಸೃಜನಶೀಲ, ಸ್ವಂತಿಕೆಯ ಆಹಾರ ಪದಾರ್ಥಗಳನ್ನು ಹುಟ್ಟುಹಾಕುವ ಮೂಲಕ ಇತಿಹಾಸವನ್ನು ಪುನಃ ಬರೆಯಲು ಪ್ರಯತ್ನಿಸುತ್ತಾರೆ. ಸಸ್ಯಾಹಾರಿ ಸುಶಿ ಅಥವಾ ರೋಟಿ ಪಿಜ್ಜಾ ಬಗ್ಗೆ ನೀವು ಈ ಮೊದಲು ಕೇಳಿದ್ದೀರಾ? ಅಂತಹ ಅಪರೂಪದ ಬಾಯಲ್ಲಿ ನಿರೂರಿಸುವ ತಿಂಡಿಗಳನ್ನು ಬಾಣಸಿಗರ ಸ್ಪರ್ಧೆಯಲ್ಲಿ ನೀವು ನೋಡಬಹುದು.
ಜಗತ್ತಿನ ಹಲವು ಪಾಕಶಾಸ್ತ್ರಜ್ಞರು, ಶೆಫ್ ಗಳು ಭಾಗವಹಿಸುವ ಈ ಅಪರೂಪ ಹಾಗೂ ಅತ್ಯಪೂರ್ವವಾದ ಪಾಕಶಾಲೆ ಕಲಾ ಸ್ಪರ್ಧೆಯನ್ನು ನೀವು ಒಂದೇ ವೇದಿಕೆಯಡಿ ವೀಕ್ಷಿಸಬಹುದು.
‘ವರ್ಲ್ಡ್ ಆಫ್ ಹಾಸ್ಪಿಟಾಲಿಟಿ’ ಯಿಂದ ಅಭೂತಪೂರ್ವ ಆಹಾರ ಮಹೋತ್ಸವವನ್ನು ಆಯೋಜಿಸಲು ಉತ್ಸುಕವಾಗಿದ್ದು, ಅಡುಗೆ ಕಲೆಯಲ್ಲಿನ ಪ್ರಾವೀಣ್ಯತೆಯನ್ನು ಅಭಿವೃದ್ಧಿಪಡಿಸಲು ಇದೊಂದು ವೇದಿಕೆಯಾಗಿದೆ.
ಈ ವಾರ್ಷಿಕ ಅಡುಗೆ ಕಲೆ ಪ್ರದರ್ಶನದಲ್ಲಿ ದಕ್ಷಿಣ ಭಾರತದ ನೂರಾರು ಪ್ರತಿಭಾವಂತ ಅಡುಗೆ ಪ್ರಾವೀಣ್ಯರು ಅಪರೂಪದ ಸವಿರುಚಿಯ ಅಡುಗೆಯನ್ನು ಮಾಡಿ ಉಣಬಡಿಸಲಿದ್ದಾರೆ.
ಅಂತರಾಷ್ಟ್ರೀಯ ಮಟ್ಟದ ವೃತ್ತಿಪರ ಶೆಫ್ ಗಳನ್ನು, ಆತಿಥ್ಯ ಕ್ಷೇತ್ರದ ತಜ್ಞರನ್ನು, ಆಹಾರ ಸೇವೆ ಉತ್ಪನ್ನಗಳ ಬ್ರಾಂಡ್ ಗಳನ್ನು ಒಂದೇ ವೇದಿಕೆಯಡಿ ತರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ತೀರ್ಪುಗಾರರು ವೀಕ್ಷಣೆ ಮಾಡಿ ತೀರ್ಪು ನೀಡಲಿದ್ದಾರೆ.
ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ಮುಂದಿನ ತಲೆಮಾರಿನ ಪಾಕಶಾಲೆ ಪ್ರತಿಭಾನ್ವಿತರ ಕಲಾ ಸಾಮರ್ಥ್ಯಕ್ಕೆ ಒಂದು ಉತ್ತಮ ವೇದಿಕೆಯಾಗಿದೆ. ಹೊಸ ತಂತ್ರಜ್ಞಾನ ಮತ್ತು ಅನ್ವೇಷಣೆ ಮೂಲಕ ಆಹಾರ ತಯಾರಿಕೆಯಲ್ಲಿ ಮುಕ್ತ ಜಾಗವನ್ನು ಮರುರಚನೆ ಮಾಡುವುದು.
ಸಾಂಪ್ರದಾಯಿಕ ತಿನಿಸುಗಳ ಜೊತೆ ಆಧುನಿಕ ಸ್ಪರ್ಶದೊಂದಿಗೆ ವೈವಿಧ್ಯಮಯ ಆಹಾರಗಳು ಗ್ರಾಹಕರಿಗೆ, ಸ್ಪರ್ಧೆ ವೀಕ್ಷಿಸಲು ಬಂದ ಅತಿಥಿಗಳಿಗೆ ಲಭ್ಯ.
ಸ್ಪರ್ಧೆಯ ವಿಧಾನಗಳು:
• ಜಾಗತಿಕ ಮಟ್ಟದ ಆಹಾರ ಪದಾರ್ಥಗಳನ್ನು ಸ್ಪರ್ಧೆಯಲ್ಲಿ ಪ್ರದರ್ಶಿಸುವುದು.
• ತಂತ್ರಜ್ಞಾನಗಳನ್ನು ಖಾತರಿಪಡಿಸುವಾಗ ಆಹಾರಗಳನ್ನು ಪ್ರಸ್ತುತಪಡಿಸುವ ರೀತಿ ಮುಖ್ಯ.
• ಇಡೀ ಆಹಾರ ವಲಯ ಕ್ಷೇತ್ರದ ಮೇಲೆ ಪ್ರಭಾವ ಬೀರಲು ಚಾಂಪಿಯನ್ಗಳು ಹೊಸ ಆಹಾರ ಪದಾರ್ಥಗಳು ಮತ್ತು ವಸ್ತುಗಳನ್ನು ಬಳಸುತ್ತಾರೆ.
• ಆಹಾರೋದ್ಯಮ, ಆತಿಥ್ಯ, ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಯುವ ಪ್ರತಿಭಾವಂತರನ್ನು ಗುರುತಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ 98440 06736 ಸಂಪರ್ಕಿಸಬಹುದು. www.worldofhospitality.in