ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪರ್ಯಾಯ ಕಲಿಕೆಗೆ ಒತ್ತು
ಸುದ್ದಿಮೂಲ ವಾರ್ತೆ
ಕೆ.ಆರ್.ಪುರ,ಜೂ.11:ಶಾಲೆಯಿಂದ ಪರ್ಯಾಯ ಕಲಿಕಾ ಮಾರ್ಗ, ನಿರೀಕ್ಷಿತವಾದುದನ್ನು ಶಿಕ್ಷಣದ ಮೂಲಕ ಕಲಿಕೆಯ ಸೃಜನಶೀಲ ವಾತಾವರಣ ಸೃಷ್ಟಿಸುವುದೇ ಶಿಕ್ಷಣ ಎಂದು ಟಿಎಎಲ್ ಸಿ ಸಂಸ್ಥಾಪಕಿ ಲತಾ ಗಂಗಾಧರನ್ ಹೇಳಿದರು.
ಕೆ.ಆರ್.ಪುರ ಸಮೀಪದ ಎಇಸಿಎಸ್ ಬಡಾವಣೆಯ ಟಿಎಎಲ್ ಸಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಪರ್ಯಾಯ ಕಲಿಕೆಯ ವಿಧಾನದ ಮೂಲಕ ಶಿಕ್ಷಣದಲ್ಲಿ ‘ಮೇಕ್ ಇನ್ ಇಂಡಿಯಾ’ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ನೀತಿ ತತ್ವಗಳನ್ನು ಸಂಯೋಜಿಸುವ ಮತ್ತು ಕಲಿಕೆಯನ್ನು ವಿನೋದ ಮತ್ತು ಪ್ರಾಯೋಗಿಕವಾಗಿಸುವ ಮೂಲಕ ವಿದ್ಯಾರ್ಥಿಗಳು ಜ್ಞಾನವನ್ನು ಪಡೆಯುವ ವಿಧಾನವನ್ನು ಬದಲಾಯಿಸುವ ಉದ್ದೇಶ ಹೊಂದಬೇಕಿದೆ ಎಂದರು.
ಇಂದು ಶಾಲೆಗಳು ಕಟ್ಟಿಕೊಂಡಿರುವ ಎಲ್ಲಾ ಸಂಕೋಲೆಗಳಿಂದ ಮುಕ್ತವಾಗಬೇಕಿದೆ. ಮೌಖಿಕ ಕಲಿಕೆ ಮತ್ತು ಸ್ಪರ್ಧೆಯನ್ನು ಪ್ರೋತ್ಸಾಹಿಸದೆ, ಸವಾಲುಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡದೇ ಭಾರತೀಯ ಶಿಕ್ಷಣ ವ್ಯವಸ್ಥೆಯು ಬ್ರಿಟಿಷರಿಂದ ಅನುವಂಶಿಕವಾಗಿ ಪಡೆದ ಮೌಖಿಕ ಕಲಿಕೆ ಮತ್ತು ಬಳಕೆಯಲ್ಲಿಲ್ಲದ ಬೋಧನಾ ತಂತ್ರಗಳಿಗೆ ಸಿಲುಕಿಕೊಂಡಿದ್ದೇವೆ ಎಂದು ಹೇಳಿದರು.