ಸುದ್ದಿಮೂಲವಾರ್ತೆ
ಕೊಪ್ಪಳ ಜೂ 12;ರಾಜ್ಯದಲ್ಲಿ ಶಕ್ತಿ ಯೋಜನೆ ನಿನ್ನೆಯಿಂದ ಜಾರಿಯಾಗಿದ್ದು ಮಹಿಳೆಯರು ಉಚಿತ ಬಸ್ ಪ್ರಯಾಣದಿಂದ ಖುಷಿಪಡುತ್ತಿದ್ದಾರೆ. ನಿತ್ಯ ದುಡಿಮೆಗೆ ಬೇರೆ ಬೇರೆ ಕಡೆ ಹೋಗುವ ಮಹಿಳೆಯರು ಸ್ವಲ್ಪ ಜಾಸ್ತಿನೆ ಖುಷಿಪಡುತ್ತಿದ್ದಾರೆ. ತಮ್ಮ ದುಡಿಮೆಯಲ್ಲಿಯೇ ಬಸ್ ಚಾರ್ಜ್ ಖರ್ಚು ಮಾಡುತ್ತಿದ್ದ ಆ ಮಹಿಳೆಯರು ಬಸ್ ಚಾರ್ಜ್ ಉಳಿಯುತ್ತಿರೋದು ಖುಷಿಗೆ ಕಾರಣವಾಗುತ್ತಿದೆ.
ಕೊಪ್ಪಳದ ಗಾಂಧಿನಗರದ ನೂರಾರು ಮಹಿಳೆಯರು ನಿತ್ಯ ಬೇರೆ ಬೇರೆ ಕಡೆ ದುಡಿಮೆಗೆ ಹೋಗುತ್ತಾರೆ. ಪ್ಲಾಸ್ಟಿಕ್ ಗೃಹಪಯೋಗಿ ವಸ್ತುಗಳು, ಕಸಪೊರಕೆಗ, ಕೊಡ ಸೇರಿದಂತೆ ಅನೇಕ ವಸ್ತುಗಳ ಮಾರಾಟಕ್ಕೆ ಬಸ್ ಮೂಲಕ ಜೋಗುತ್ತಾರೆ.
ನಿತ್ಯ ವ್ಯಾಪಾರ ಮಾಡೋದರಲ್ಲಿ ನೂರಿಂದ ಇನ್ನೂರು ರೂಪಾಯಿ ಬಸ್ ಚಾರ್ಜ್ ಖರ್ಚಾಗುತ್ತಿತ್ತು. ಈಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಈ ಹಣ ಉಳಿಯುತ್ತಿದೆ. ದುಡಿಮೆಯ ಲಾಭ ಬಸ್ ಚಾರ್ಜ್ ಹೋಗುತ್ತಿತ್ತು. ಈಗ ಈ ಹಣ ನಿನ್ನೆಯಿಂದ ಉಳಿಯುತ್ತಿದೆ.
ಅವರ ಮಾರಾಟದ ವಸ್ತುಗಳಿಗೆ ಲಗೇಜ್ ತೆಗೆದುಕೊಳ್ಳುತ್ತಾರೆ. ಆದರೆ ನಾವು ಪ್ರಯಾಣಿಸುವ ಚಾರ್ಜ್ ಹಣ ಉಳಿಯುತ್ತಿದೆ ಎಂದು ಆ ಮಹಿಳೆಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇದೇ ವೇಳೆ ರಾಜ್ಯ ಸರಕಾರದ ಈ ಯೋಜನೆಯು ಉತ್ತಮವಾದ ಯೋಜನೆಯಾಗಿದೆ. ಕೆಲಸಕ್ಕಾಗಿ ಬೇರೆ ಬೇರೆ ಪ್ರಯಾಣಿಸಹೇಳಿದ್ದಾರೆಪ್ರಯಾಣಿಕರಿಗೆ ಇದು ಖುಷಿ ವ್ಯಕ್ತಪಡಿಸಿದರು. ಯಾವುದೇ ಯೋಜನೆಯಾದರೂ ಅದಕ್ಕೆ ಪಾಸಿಟಿವ್ ಹಾಗು ನೆಗಟಿವ್ ಇದ್ದೆ ಇರುತ್ತದೆ. ಈ ಯೋಜನೆಯನ್ನು ಒಂದೆರೆಡು ದಿನ ಜಾರಿಗೊಳಿಸಿ ಬಂದ್ ಮಾಡಬಾರದು ಮಹಿಳೆಯರು ಹೇಳಿದ್ದಾರೆ.