ಸುದ್ದಿಮೂಲವಾರ್ತೆ
ಕೊಪ್ಪಳ ಜೂ 12: ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದ ಸಾವನ್ನಪ್ಪಿರುವುದು ಹಾಗು ವಾಂತಿಬೇಧಿಗೆ ಮೂಲ ಜೆಜೆಎಂ ಕಾಮಗಾರಿ ಕಾರಣವಾಗಿದೆ. ಜೆಜೆಎಂ ಕಾಮಗಾರಿ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
ಗುತ್ತಿಗೆ ಪಡೆದ ಗುತ್ತಿಗೆದಾರ ಮೇಲೆ ಕೇಸ್ ಹಾಕಿ ಜೈಲಿಗೆ ಕಳುಹಿಸಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಎಚ್ವರಿಸಿದರು.
ಅವರು ಇಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಜೆಜೆಎಂಗಾಗಿ ಒಟ್ಟು 394 ಕೋಟಿ ರೂಪಾಯಿಯಲ್ಲಿ 722 ಕಾಮಗಾರಿಗಳು ನಡೆದಿವೆ. ಆದರೆ ಯಾವು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಈ ಕಾಮಗಾರಿಯನ್ನು ಬೇಗ ಮುಗಿಸಬೇಕೆಂದು ಸೂಚಿಸಿದರು.
ಕುಡಿವ ನೀರು ಸಮಸ್ಯೆಯಾಗಿರುವ ಗ್ರಾಮಗಳಿಗೆ ಅಧಿಕಾರಿಗಳು ಬೇಗ ಅಟೆಂಡ್ ಮಾಡಬೇಕು. ಸಾರ್ವಜನಿಕರು ಫೋನು ಮಾಡಿದಾಗ ಸೌಜನ್ಯದಿಂದ ವರ್ತಿಸಿರಿ. ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರ ಸರಿಯಾಗಿ ಕೆಲಸ ಮಾಡಬೇಕು. ಸಮಸ್ಯೆ ಬಂದರೆ ಜಿಲ್ಲಾ ಆರೋಗ್ಯಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಯಂತ್ರಧಾರೆ ಯೋಜನೆಯಲ್ಲಿ ರೈತರಿಗೆ ಸರಿಯಾಗಿ ಯಂತ್ರಗಳನ್ನು ನೀಡುತ್ತಿಲ್ಲ. ಚಿತ್ರದುರ್ಗಾದ ವರ್ಷಾ ಅಗ್ರಿ ಕಂಪನಿಯ ಮೇಲೆ ಕ್ರಮ ಕೈಗೊಳ್ಳಬೇಕು. ಅವರ ಗುತ್ತಿಗೆಯನ್ನು ಬ್ಲಾಕ್ ಲಿಸ್ಟ್ ಸೇರಿ ಈಗಾಗಲೇ ಇಲಾಖೆಯಿಂದ ಹಣ ನೀಡಲಾಗಿದೆ. ಅದನ್ನು ವಾಪಸ್ಸು ಪಡೆಯಬೇಕೆಂದರು.
ಜಿಲ್ಲೆಯ ಅಧಿಕಾರಿಗಳು ತಾಲೂಕಾ ಮಟ್ಟದಲ್ಲಿ ದಿಡೀರ ಭೇಟಿ ನೀಡಿ. ಅಲ್ಲಿಯ ಅಧಿಕಾರಿಗಳ ಕೆಲಸ ಪರಿಶೀಲಿಸಿ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ತಡೆಯಬೇಕು.ಗುಡ್ಡದಲ್ಲಿ ಗುತ್ತಿಗೆಯಲ್ಲಿ ಇಸ್ಪೇಟ್ ಆಡಿಸುತ್ತಿದ್ದಾರೆ. ಗುಡ್ಡದಲ್ಲಿ ಆಟವಾಡುವದನ್ನು ದುಡಿಮೆ ಮಾಡಿಕೊಂಡಿದ್ದಾರೆ. ಪೊಲೀಸರು ನಿಲ್ಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಪಾಂಡೆಯಾ ಹಾಗು ಡಿಎಫ್ಒ ಕಾವ್ಯಾ ಚತುರ್ವೇದಿ ಇದ್ದರು.