ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.14: ಇಂದು ವಿಶ್ವ ರಕ್ತದಾನಿಗಳ ದಿನ. ಒಮ್ಮೆ ತೆಗೆದುಕೊಂಡ ರಕ್ತ ನಾಲ್ಕು ಜನರ ಜೀವ ಉಳಿಸುತ್ತಿದೆ. ಇತ್ತೀಚಿಗೆ ರಕ್ತದಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಮಧ್ಯೆ ಕೊಪ್ಪಳದಲ್ಲಿರುವ ಲಕ್ಷ್ಮಿಕಾಂತ ಗುಡಿ ಎಂಬುವವರು ಇಲ್ಲಿಯವರೆಗೂ 74 ಬಾರಿ ರಕ್ತ ದಾನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರ ಸಾಧನೆಗೆ ಸನ್ಮಾನ ಗೌರವವು ಸಿಗುತ್ತಿದೆ.
ಕಾರ್ಲ್ಸ ಎಂಬುವವರ ರಕ್ತದಲ್ಲಿ ಕಣಗಳ ವಿಭಜನೆ ಮಾಡಿ ದಾನ ಮಾಡಬಹುದು ಎಂಬಯವುದನ್ನು ತೋರಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಇಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ. ಈ ಮಧ್ಯೆ ಕೊಪ್ಪಳದಲ್ಲಿ ವಾಣಿಜೋದ್ಯಮಿಯೊಬ್ಬರು ಕಳೆದ ಹದಿನೆಂಟುವರೆ ವರ್ಷದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೆ ಹತ್ತಿರದ ರಕ್ತಭಂಡಾರ ಕೇಂದ್ರಕ್ಕೆ ಹೋಗಿ ರಕ್ತದಾನ ಮಾಡುತ್ತಾರೆ
ಲಕ್ಷ್ಮಿಕಾಂತ ಗುಡಿ ಒಮ್ಮೆ ತಮ್ಮ ಸ್ನೇಹಿತರಿಗಾಗಿ ರಕ್ತ ದಾನ ಮಾಡಲು ಆಸ್ಪತ್ರೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಆ ವ್ಯಕ್ತಿಗೆ ರಕ್ತದ ಅವಶ್ಯಕತೆ ಇತ್ತು. ರಕ್ತ ಸಕಾಲಕ್ಕೆ ರಕ್ತ ಸಿಗದೆ ವ್ಯಕ್ತಿ ಸಾವನ್ನಪ್ಪಿದರು. ಈ ಘಟನೆಯ ನಂತರ ನಿಯಮಿತವಾಗಿ ವರ್ಷಕ್ಕೆ ನಾಲ್ಕು ಬಾರಿ ರಕ್ತವನ್ನು ನೀಡುತ್ತಾರೆ ಬಂದಿದ್ದಾರೆ. ರಕ್ತದಾನ ಮಾಡುವುದು ಇಂದಿನ ದಿನಗಳಲ್ಲಿ ಬಹಳ ಅವಶ್ಯಕತೆ ಇದೆ ಎಂದು ಹೇಳುತ್ತಾರೆ.
ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುತ್ತಿರುವ ಲಕ್ಷ್ಮಿಕಾಂತ ಗುಡಿಯವರು ಮುಂದಿನ ದಿನಗಳಲ್ಲಿ ಅಂಗಾಂಗ.ದೇಹ ಮಾಡುವ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಇವರನ್ನು ಕೊಪ್ಪಳದ ಗವಿಮಠದಲ್ಲಿಯ ಜಾತ್ರೆಯಲ್ಲಿ ಸ್ವಾಮೀಜಿಗಳು ಸನ್ಮಾನಿಸಿದ್ದಾರೆ. ಅವರ ಸಾಧನೆಯು ಇನ್ನೊಬ್ಬರಿಗೆ ಪ್ರೇರಣಾದಾಯಕವಾಗಿದೆ ಎಂದು ಶ್ರೀಗವಿಸಿದ್ದೇಶ್ವರ ಸ್ವಾಮಿಗಳು ಹೇಳಿದ್ದಾರೆ.
ಇಂದಿನ ದಿನಗಳಲ್ಲಿ ರಕ್ತಹಿರುವವರೇ ಹೆಚ್ಚಾಗಿರುವಾಗ ಇನ್ನೊಬ್ಬರಿಗಾಗಿ ಈಗಾಗಲೇ 74 ಬಾರಿ ರಕ್ತ ದಾನ ಮಾಡಿ. ಆರೋಗ್ಯವಾಗಿರುವವರೆಗೂ ರಕ್ತದಾನ ಮಾಡಲಿರುವ ಲಕ್ಷ್ಮಿಕಾಂತ ಗುಡಿಯವರ ಕಾರ್ಯ ಮೆಚ್ಚುವಂತದೆ.