ಸುದ್ದಿಮೂಲ ವಾರ್ತೆ
ಮೈಸೂರು, ಜೂ.15: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಇನ್ನು ಆಗುತ್ತಿಲ್ಲ. ಇದರ ಪರಿಣಾಮ ಬೆಂಗಳೂರು, ಮೈಸೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮತ್ತು ಲಕ್ಷಾಂತರ ಎಕರೆಗೆ ನೀರುಣಿಸುವ ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದೆ.
ಕಳೆದ 5 ವರ್ಷಗಳ ಅವಧಿಗೆ ಹೋಲಿಸಿದರೆ ಈ ಬಾರಿ ಭಾರಿ ಪ್ರಮಾಣದಲ್ಲಿ ನೀರು ಕಡಿಮೆ ಆಗಿದೆ. ಮಳೆರಾಯ ಕೃಪೆ ತೋರದಿದ್ದರೆ ಕೃಷಿ ಮತ್ತು ಕುಡಿಯುವ ನೀರಿಗೆ ಸಮಸ್ಯೆ ಉಲ್ಬಣ ಆಗಬಹುದು ಎಂಬ ಆತಂಕ ಉಂಟಾಗಿದೆ.
124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಗುರುವಾರ 82.32 ಅಡಿಗಳಷ್ಟೇ ನೀರಿದೆ. ಇದರ ನೀರಿನ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ. ಈಗ 11.847 ಟಿಎಂಸಿ ಇದೆ. ಈಗಿರುವ ನೀರಿನಲ್ಲಿ 4.847 ಟಿಎಂಸಿ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಬಹುದಷ್ಟೇ. ಉಳಿದ 7 ಟಿಎಂಸಿ ನೀರು ಡೆಡ್ ಸ್ಟೋರೆಜ್ ಆಗುತ್ತದೆ. ಈ ನೀರನ್ನು ಬಳಸಲಾಗುವುದಿಲ್ಲ. ಮಳೆಯಾಗದಿದ್ದರೆ ಜುಲೈ 2 ನೇ ವಾರದಿಂದ ಬೆಂಗಳೂರು, ಮೈಸೂರು, ಮಂಡ್ಯ ಮತ್ತು ರಾಮನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಜಲಾಶಯದಲ್ಲಿ ಕಳೆದ ವರ್ಷ ಎಷ್ಟಿತ್ತು ?
ಗರಿಷ್ಠ ಮಟ್ಟ124.80 ಅಡಿಗಳು.
ಇಂದಿನ ಮಟ್ಟ- 105.55 ಅಡಿ.
ಈಗ ಎಷ್ಟಿದೆ (ಜೂ,15 ರಂದು)
ಸಂಗ್ರಹ ಸಾಮರ್ಥ್ಯ-49.452 ಕ್ಯೂಸೆಕ್
ಇಂದಿನ ಸಂಗ್ರಹ-27.482 ಕ್ಯೂಸೆಕ್
ಒಳ ಹರಿವು-1,425 ಕ್ಯೂಸೆಕ್
ಹೊರ ಹರಿವು-1,143 ಕ್ಯೂಸೆಕ್