ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಭರ್ಜರಿ ಸಿದ್ಧತೆ
ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.15: ಕಳೆದ ಮೂರು ನಾಲ್ಕು ವರ್ಷಗಳಿಂದ ಕೊರೋನಾ ಕಾರಣದಿಂದಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಮತ್ತು ಮನೆ ಮನೆಯಲ್ಲಿ ಯೋಗ ಮಾಡಿ ಆಚರಿಸಲಾಯಿತು. ಆದರೆ ಈ ವರ್ಷ ಒಂಬತ್ತನೇ ಯೋಗ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಸಾವಿರಾರು ಯೋಗಪಟುಗಳು ಭಾಗಿಯಾಗಿ ಸಾಮೂಹಿಕ ಯೋಗ, ಧ್ಯಾನ ಮಾಡುವಂತಹ ಕಾರ್ಯಕ್ರಮವನ್ನು ಸರ್ಕಾರದ ಆಯುಷ್ ಇಲಾಖೆ ವತಿಯಿಂದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲು ಉದ್ದೇಶಿಸಲಾಗಿದೆ.
ಈ ಸಂಬಂಧ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಆಯುಷ್ ಇಲಾಖೆಯ ಅಧಿಕಾರಿಗಳು, ಶ್ವಾಸಗುರು ವಚನಾನಂದ ಸ್ವಾಮೀಜಿ, ಯೋಗಗಂಗೋತ್ರಿ ಸಂಸ್ಥೆಯ ಯೋಗಗುರು ಶ್ರೀ ಆರಾಧ್ಯ, ಯೋಗಿ ಪ್ರಕಾಶ್ ಗುರೂಜಿ ಮತ್ತು ಅನೇಕರು ಪಾಲ್ಗೊಂಡಿದ್ದರು.
ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯು ಹಲವಾರು ವಷರ್Àಗಳಿಂದ ಯೋಗ ಸೇವೆಯಲ್ಲಿ ತೊಡಗಿರುವ ಯೋಗಗಂಗೋತ್ರಿ ಸಂಸ್ಥೆ ಶ್ವಾಸ ಯೋಗ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಇನ್ನು ಅನೇಕ ಸಂಘ ಸಂಸ್ಥೆಗಳ ಶಾಲಾ-ಕಾಲೇಜುಗಳ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ಉದ್ದೇಶಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಅನೇಕ ಸಚಿವರು, ಶಾಸಕರು ಜನಪ್ರತಿನಿಧಿಗಳು ಯೋಗ ಗುರುಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ಜೂ.21ರ ಬೆಳಗ್ಗೆ 6 ರಿಂದ 8:30ರ ವರೆಗೆ ನಡೆಯಲಿದೆ. ಭಾಗವಹಿಸಲು ಆಸಕ್ತಿಯುಳ್ಳ ಸಾರ್ವಜನಿಕರು ಸಂಘ ಸಂಸ್ಥೆಗಳು ಯೋಗ ಗಂಗೋತ್ರಿ ಸಂಸ್ಥೆಗೆ ಮೊ.ಸಂ: 8884646108 ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ.