ಸುದ್ದಿಮೂಲ ವಾರ್ತೆ
ಮಾಲೂರು, ಜೂ.16:ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ದೊಡ್ಡ ಶಿವಾರ ನಾರಾಯಣಸ್ವಾಮಿ ನಾಣಿ ಮಾತನಾಡಿ. ಇತ್ತಿಚೆಗೆ ನೂತನ ಸರ್ಕಾರ ರಚನೆಯಾಗಿ ಒಂದು ತಿಂಗಳಲ್ಲಿ ವಿದ್ಯುತ್ ದರವನ್ನು ಏಕಾಏಕಿ ಏರಿಸಿ ಬಡವರ, ಮಧ್ಯಮ ವರ್ಗದವರ, ಸಣ್ಣ ಕೈಗಾರಿಕೆಗಳ ಉದ್ಯಮಿಗಳ ಹೊಟ್ಟೆ ಮೇಲೆ ಬರೆ ಎಳೆಯುತ್ತಿದ್ದು. ವಿದ್ಯುತ್ ದರ ಏರಿಸಿದ್ದಲ್ಲದೆ ಮಧ್ಯ ಮಧ್ಯ ಲೋಡ್ ಶೆಡ್ಡಿಂಗ್ ಮಾಡಿ ಜನರಿಗೆ ಕಿರಿಕಿರಿ ಮಾಡುತ್ತಿದ್ದು. ಯಾವುದೇ ರೀತಿಯಾಗಿ ವಿದ್ಯುತ್ ಗೆ ಅಭಾವ ಇಲ್ಲ ಆದರೂ ರಾಜ್ಯ ಸರ್ಕಾರ ವಿದ್ಯುತ್ ಪ್ರಭಾವ ಸೃಷ್ಟಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ 200 ಯೂನಿಟ್ ರವರೆಗೂ ಉಚಿತ ವಿದ್ಯುತ್ ನೀಡಲು ಘೋಷಣೆ ಮಾಡಿದ್ದು, ಮೀಟರ್ರಿನ ಠೇವಣಿ ದರವನ್ನು ಮತ್ತು ಇತರೆ ದರ ಗಳನ್ನು ಏರಿಕೆ ಮಾಡಿರುತ್ತಾರೆ. ಕೇವಲ 300 ಬರುತ್ತಿರುವ ವಿದ್ಯುತ್ ಶುಲ್ಕ 800 ರೂಗಳಿಂದ 1000 ಸಾವಿರ ರೂಗಳಷ್ಟು ಅಂದರೆ ಮೂರು ಪಟ್ಟು ಏರಿಕೆ ಮಾಡಿರುತ್ತಾರೆ. ಇಷ್ಟು ವರ್ಷಗಳಿಂದ ವಿದ್ಯುತ್ ದರ ಏರಿಕೆಯಾಗದೆ ಪ್ರಸ್ತುತ ಜಾಸ್ತಿ ಆಗಿರುವ ದರಗಳನ್ನು ಮರುಪರಿಸಲಿಸಿ ಸಾರ್ವಜನಿಕರಿಗೆ ಹಾಗೂ ಬೀದಿ ವ್ಯಾಪಾರಿಗಳಿಗೆ ಮಧ್ಯಮ ವರ್ಗದವರಿಗೆ ಅನುಕೂಲಕರವಾಗುವಂತ ನಿಗದಿಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ ಮಾಡುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ಕರವೇ ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.
ಬೆಸ್ಕಾಂ ಸಹಾಯ ಕಾರ್ಯನಿರ್ವಾಹಕ ಇಂಜಿನಿಯರ್ ಅನ್ಸರ್ ರವರು ಮನವಿ ಸ್ವೀಕರಿಸಿ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ದಯಾನಂದ್ , ಕೊಪ್ಪ ಚಂದ್ರು,ದಾಕ್ಷಾಯಿಣಿ, ಸುರೇಶ್ ರೆಡ್ಡಿ, ನಾಗರಾಜ್, ಚಿರಂಜೀವಿ, ಮಂಜುನಾಥ್, ಮಿಥುನ್, ಶ್ರೀನಿವಾಸ್, ಮಧು ಶಿವಾರ,ಕಾರ್ತಿಕ್, ನಾಗರಾಜ್, ಅಮರನಾಥ್, ಮಣಿ, ರಮೇಶ್,ಕಿರಣ್ ಸೇರಿದಂತೆ ಇನ್ನಿತರರು ಇದ್ದರು.