ಸುದ್ದಿಮೂಲ ವಾರ್ತೆ
ಕಲಬುರಗಿ,ಜೂ.16: ಅಕ್ರಮ ಮರಳು ಸಾಗಣೆ ತಡೆಯಲು ಹೋದ ಮುಖ್ಯಪೇದೆ ಮೇಲೆ ಟ್ಯಾಕ್ಟರ್ ಹರಿದು ಪೇದೆ ಮೃತಪಟ್ಟ ಘಟನೆ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ನೆಲೋಗಿ ಠಾಣೆಯ ಮುಖ್ಯ ಪೇದೆ ಮಯೂರ್ (50) ಮೃತ. ಭೀಮಾನದಿಯಿಂದ ಅಕ್ರಮ ಮರಳು ಸಾಗಣೆ ತಡೆಯಲು ಹುಲ್ಲೂರ್ ಬಳಿ ಚಕ್ ಪೋಸ್ಟ್ ಹಾಕಲಾಗಿತ್ತು. ಇಲ್ಲಿ ಮರಳು ತಪಾಸಣೆ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಎಸ್ಪಿ ಇಶಾ ಪಂತ ಭೇಟಿ ನೀಡಿದ್ದಾರೆ.