ಸುದ್ದಿಮೂಲ ವಾರ್ತೆ
ಮೈಸೂರು,ಜೂ.16: ತಂಗಿಯನ್ನು ಪ್ರೀತಿಸುತ್ತಿದ್ದಎಂಬ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ದುರ್ಘಟನೆ ನಗರದ ಹೊರವಲಯದಲ್ಲಿ ಇರುವ ಬೆಳವಾಡಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಹೇಮಂತ್ ಅಲಿಯಾಸ್ ಸ್ವಾಮಿ (23) ಕೊಲೆಯಾದ ದುರ್ದೈವಿ. ಆತನನ್ನು ಕಲ್ಲಿನಿಂದ ಜಜ್ಜಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಯುವತಿಯ ಅಣ್ಣ ಸಾಗರ್ ಮತ್ತು ಆತನ ಸ್ನೇಹಿತರು, ಕೊಲೆಯಾದ ಹೇಮಂತ್ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಕೃತ್ಯ ಎಸಗಿದ್ದಾರೆ.
ಸಾಗರ್, ಪ್ರತಾಪ್ ಹಾಗೂ ಮಂಜು ಕೊಲೆ ಮಾಡಿದ ಆರೋಪಿಗಳು ಸಾಗರ್ ಸಹೋದರಿಯನ್ನು ಹೇಮಂತ್ ಪ್ರೀತಿಸುತ್ತಿದ್ದ. ಇದೇ ವಿಚಾರವಾಗಿ ಸಾಗರ್ ಹಾಗೂ ಸ್ವಾಮಿ ನಡುವೆ ವೈಷಮ್ಯ ಬೆಳೆದಿತ್ತು. ಈ ಹಿನ್ನೆಲೆಯಲ್ಲಿ ಸ್ನೇಹಿತರ ಜೊತೆ ಸೇರಿ ಸಾಗರ್ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.