ಸುದ್ದಿಮೂಲ ವಾರ್ತೆ
ಜೂ,16: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ತಿಪಟೂರು ತಾಲೂಕು ರಂಗಾಪುರ ವಲಯದ ತಡಸೂರು ಅನ್ನಪೂರ್ಣೇಶ್ವರಿ ಜ್ಞಾನ ವಿಕಾಸ ಕೇಂದ್ರದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು.
ವಕೀಲರಾದ ನಟರಾಜು ಮಹಿಳಾ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು. ಆರೋಗ್ಯ ರಕ್ಷಾ ಕಾರ್ಡ್ ನೀಡಿದರು.
ಈ ಸಂದರ್ಭದಲ್ಲಿ ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ, ಮೇಲ್ವಿಚಾರಕ ಕೆ. ಅಣ್ಣಪ್ಪ, ಸೇವಾಪ್ರತಿನಿಧಿ ದಿವ್ಯಾ, ಸಂಘದ ಅಧ್ಯಕ್ಷೆ ಲಲಿತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.