ಸುದ್ದಿಮೂಲ ವಾರ್ತೆ
ಆನೇಕಲ್, ಜೂ 16 : ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಾದ ಜಿಗಣಿ., ವಡ್ಡರಪಾಳ್ಯ, .ಮಂಚನಹಳ್ಳಿ ಗ್ರಾಮಗಳಿಗೆ 9 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕವನ್ನು ಸಿಡಿವೈ ಮ್ಯಾಕ್ಸ್ ಕಂಪನಿ ಸ್ಥಾಪಿಸಿಕೊಟ್ಟಿದೆ.
ಸಿಡಿವೈ ಮ್ಯಾಕ್ಸ್ ಕಂಪನಿಯು ಸಿಎಸ್ ಆರ್ ನಿಧಿಯಿಂದ ಜಿಗಣಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಸುಮಾರು 8.5 ಲಕ್ಷ ರೂಪಾಯಿ ವೆಚ್ಚದಲ್ಲಿ ಮಳೆನೀರಿನ ಹಿಂಗ್ಗು ಗುಣಿ ಮತ್ತು ಶೌಚಾಲಯವನ್ನು ಮಕ್ಕಳ ಅನುಕೂಲಕ್ಕೆ ಕಟ್ಟಿಸಿಕೊಡಲಾಗಿದೆ.
ಹಾಗೆಯೇ, ವಡ್ಡರಪಾಳ್ಯ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸುಮಾರು 8 ಲಕ್ಷ ರೂ. ವೆಚ್ಚದ ಹೈಟೆಕ್ ಶೌಚಾಲಯ ನಿರ್ಮಾಣ, ವಡೆರಮಂಚನಹಳ್ಳಿ ಗ್ರಾಮಕ್ಕೆ ಸುಮಾರು 8.5 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ.
ಇಷ್ಟೇಲ್ಲ ಸೌಕರ್ಯಗಳನ್ನ ಸಾರ್ವಜನಿಕರಿಗೆ ಮಾಡಿಕೊಟ್ಟ ಕಂಪನಿಯ ಹಿರಿಯರಿಗೆ ಶಾಲೆಯ ಅಡಳಿತ ಮಂಡಳಿಗಳು ಹಾಗೂ ಗ್ರಾಮಸ್ಥರು ಸೇರಿ ಸನ್ಮಾನ ಮಾಡಿ ಗೌರವಿಸಿ ಧನ್ಯವಾದಗಳನ್ನ ತಿಳಿಸಿದರು.
ಈ ಸಂದರ್ಭದಲ್ಲಿ ಕಂಪನಿಯ ಉಪಾಧ್ಯಕ್ಷರಾದ ಜಾಹಗೀರ್ ದಾರ್ ಹಾಗೂ ಕಂಪನಿಯ ಪರಿಸರ ಆರೋಗ್ಯ ರಕ್ಷಣಾ ವಿಭಾಗದ ನಿರ್ವಹಕರಾದ ವಿಷ್ಣುಮೂರ್ತಿ ಭಟ್, ಕಂಪನಿ ಗುತ್ತಿಗೆದಾರರಾದ ಗಂಗಾಧರ್, ಜಿಗಣಿ ಪುರಸಭಾ ಸದಸ್ಯ ಹರೀಶ್, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಅಂಬರೀಷ್, ಶಿಕ್ಷಣ ಸಂಯೋಜಕ ನವೀನ್, ಶಾಲೆಯ ಮುಖ್ಯೋಪಾಧ್ಯಾಯನಿ ಜಯಶ್ರೀ ಹಾಗೂ ಶಾಲೆಯ ಸಹಾ ಶಿಕ್ಷಕ ಶಿಕ್ಷಕಿಯರು ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.