ಸುದ್ದಿಮೂಲ ವಾರ್ತೆ
ಕುಷ್ಟಗಿ,ಜೂ.16: ತಾಲೂಕಿನ 36 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಅವರ ನೇತೃತ್ವದಲ್ಲಿ ಶುಕ್ರವಾರ ಮೀಸಲಾತಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಆಡಿಟೋರಿಯಂ ಹಾಲಿನಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ 36 ಗ್ರಾಮ ಪಂಚಾಯತಿಗಳ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಮೀಸಲಾತಿಯನ್ನು ಪ್ರಕಟಿಸಲಾಯಿತು. ಅಧ್ಯಕ್ಷ ಸ್ಥಾನಗಳ ಪೈಕಿ 5 ಪರಿಶಿಷ್ಟ ಜಾತಿಗೆ, 7 ಪರಿಶಿಷ್ಟ ಪಂಗಡಕ್ಕೆ,16 ಸಾಮಾನ್ಯ ವರ್ಗಕ್ಕೆ ಹಾಗೂ ಇನ್ನುಳಿದ ಸ್ಥಾನಗಳು ಹಿಂದುಳಿದ ವರ್ಗ-ಅ, ಹಿಂದುಳಿದ ವರ್ಗ-ಬಕ್ಕೆ ಮೀಸಲಾತಿ ಹಂಚಿಕೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ವಿವರ ಮಾಹಿತಿ ಹೀಗಿದೆ.
ನಿಲೋಗಲ್ ಗ್ರಾಪಂ : ಅಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ ಅ.
ತುಗ್ಗಡೊಣಿ ಗ್ರಾಪಂ ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ
ಹನುಮನಾಳ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ, ಉಪಾಧ್ಯಕ್ಷ ಸ್ಥಾನ- ಸಾಮಾನ್ಯ ಮಹಿಳೆ.
ಮಾಲಗಿತ್ತಿ ಗ್ರಾಪಂ: ಅಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ-ಬ ಮಹಿಳೆ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ.
ಜಾಗೀರಗುಡದೂರು ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ.
ಯರಗೇರಾ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ, ಉಪಾಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ ಮಹಿಳೆ.
ಹನುಮಸಾಗರ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ.
ಕಬ್ಬರಗಿ ಗ್ರಾಪಂ : ಅಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ.
ಕಾಟಾಪೂರ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ.
ಹೂಲಗೇರಿ ಗ್ರಾಪಂ: ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ.
ಅಡವಿಭಾವಿ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ.
ಚಳಗೇರಾ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ.
ಬೆನಕನಾಳ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ.
ಹಿರೇಗೊಣ್ಣಾಗರ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ.
ಹಿರೇಬನ್ನಿಗೋಳ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ.
ಕೊರಡಕೇರಾ ಗ್ರಾಪಂ: ಅಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ, ಉಪಾಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ ಅ.
ತಳುವಗೇರಾ ಗ್ರಾಪಂ: ಅಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ ಬ ಮಹಿಳೆ.
ಬಿಜಕಲ್ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ, ಉಪಾಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ ಅ ಮಹಿಳೆ.
ದೋಟಿಹಾಳ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ.
ಕ್ಯಾದಿಗುಪ್ಪ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ- ಅ.
ಮುದೇನೂರು ಗ್ರಾಪಂ: ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ.
ಕಂದಕೂರು ಗ್ರಾಪಂ: ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ.
ಹಿರೇಮನ್ನಾಪೂರು ಗ್ರಾಪಂ: ಅಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ.
ಜುಮಲಾಪುರ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ ಮಹಿಳೆ.
ಕಿಲ್ಲಾರಹಟ್ಟಿ ಗ್ರಾಪಂ: ಅಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ.ಮೆಣೇಧಾಳ ಗ್ರಾಪಂ: ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ.ಸಂಗನಾಳ ಗ್ರಾಪಂ: ಅಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿಒ, ಉಪಾಧ್ಯಕ್ಷ ಸ್ಥಾನಕ್ಕೆ ವರ್ಗ-ಅ ಮಹಿಳೆ.
ಹಿರೇನಂದಿಹಾಳ ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ.
ಅಂಟರಠಾಣಾ ಗ್ರಾಪಂ: ಅಧ್ಯಕ್ಷ ಸ್ಥಾನ – ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸ್ಥಾನ – ಸಾಮಾನ್ಯ.ಕೇಸೂರು ಗ್ರಾಪಂ: ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ.ಲಿಂಗದಹಳ್ಳಿ ಗ್ರಾಪಂ: ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ-ಅ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ.
ಗುಮಗೇರಾ ಗ್ರಾಪಂ: ಅಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ-ಅ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ.
ಬಿಳೇಕಲ್ ಗ್ರಾಪಂ: ಅಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ – ಅ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ.
ಹಾಬಲಕಟ್ಟೆ ಗ್ರಾಪಂ: ಅಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ-ಅ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ.
ಶಿರಗುಂಪಿ ಗ್ರಾಪಂ: ಅಧ್ಯಕ್ಷ ಸ್ಥಾನ – ಹಿಂದುಳಿದ ವರ್ಗ-ಅ ಮಹಿಳೆ, ಉಪಾಧ್ಯಕ್ಷ ಸ್ಥಾನ – ಪರಿಶಿಷ್ಟ ಜಾತಿ.
ಈ ಸಭೆಯಲ್ಲಿ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ರಾಘವೇಂದ್ರರಾವ್ ಕೆ., ತಾಪಂ ಇಒ ಶಿವಪ್ಪ ಸುಬೇದಾರ ಇತರರಿದ್ದು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಆಯ್ಕೆ ಪ್ರಕ್ರಿಯೆಯನ್ನು ನಿರ್ವಹಿಸಿದರು.