ಸುದ್ದಿಮೂಲ ವಾರ್ತೆ
ತಿಪಟೂರು,ಜೂ.16 : ತಾಲ್ಲೂಕಿನ ಕಸಬಾ ಹೋಬಳಿಯ ಕರೀಕೆರೆ ಗ್ರಾಮದಲ್ಲಿ ಭಕ್ತಿ ಮತ್ತು ಸಡಗರದಿಂದ ಬ್ರಹ್ಮಲಿಂಗೇಶ್ವರ ದೇವರ ಉತ್ಸವದೊಂದಿಗೆ ಕಾರಹಬ್ಬ ಆಚರಿಸಲಾಯಿತು.
ಕಾರ ಹಬ್ಬ ಅಥವಾ ಕಾರ ಹುಣ್ಣಿಮೆಯ ಹಬ್ಬವನ್ನು ಈ ದಿನವು ಸಾಮಾನ್ಯವಾಗಿ ಮುಂಗಾರು ಮಳೆಯ ಆರಂಭದ ನಂತರ ಮೊದಲ ಹುಣ್ಣಿಮೆಯಂದು, ರೈತರು ಜಾನುವಾರುಗಳನ್ನು ಪೂಜಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಈ ದಿನವು ಬೇಸಿಗೆಯ ಅಂತ್ಯವನ್ನು ಸೂಚಿಸುತ್ತದೆ ಎಂಬ ನಂಬಿಕೆ.
ಈ ಹಬ್ಬದಲ್ಲಿ ರೈತರು ತಮ್ಮ ಬೆಳೆಗಳಿಗೆ ಉತ್ತಮ ಮಳೆಯಾಗಲಿ, ಉತ್ತಮ ಫಸಲು ಬರಲಿ ಎಂದು ಪ್ರಾರ್ಥಿಸುತ್ತಾರೆ.
ಇಲ್ಲಿನ ಗ್ರಾಮಸ್ಥರು ತಮ್ಮ ಹೊಲ, ತೋಟಗಳಲ್ಲಿ ಬೆಳೆದಿದ್ದ ಮಾವು, ಬೇವು ಬೀಟೆ
ಸೊಪ್ಪುಗಳನ್ನು ತಂದು, ಜಾನುವಾರುಗಳ ಕೊಟ್ಟಿಗೆಯನ್ನು
ಅಲಂಕರಿಸಿದರು. ನಂತರ ಜಾನುವಾರುಗಳ ಮೈತೊಳೆದು ವಿವಿಧ ಬಣ್ಣಗಳಿಂದ ಕೊಂಬುಗಳಿಗೆ ಹಾಗೂ ದೇಹಕ್ಕೆ ಅಲಂಕರಿಸಿ, ಮನೆಯಲ್ಲಿ ಪೂಜಿಸಿ ನಂತರ ಮನೆಯಲ್ಲಿ ತಯಾರಿಸಿದ ಬಗೆ ಬಗೆಯ ಅಡುಗೆಯ ತಿನಿಸುಗಳನ್ನು ನೈವೇದ್ಯ ಮೂಲಕ ರಾಸುಗಳಿಗೆ ಉಣಬಡಿಸಿದರು. ಸಂಜೆ ವೇಳೆ ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಉತ್ಸವದೊಂದಿಗೆ ಊರಿನಲ್ಲಿ ಪೂಜೆ ಸಲ್ಲಿಸಿ, ಕರೆಹಂಬಳಿಯ ಬಳ್ಳಿಯನ್ನು ಪೂಜಿಸಿ ಮನೆಗೆ ಒಯ್ಯಾಲಾಯಿತು. ಈ ಸಂಪ್ರದಾಯ ಹಿಂದಿನಿಂದ ನಡೆದುಕೊಂಡುbಬಂದಿದೆ ಎನ್ನುತ್ತಾರೆ ಹಿರಿಯರು.