ಸುದ್ದಿಮೂಲ ವಾರ್ತೆ
ಬೇತಮಂಗಲ, ಜೂ 18 : ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುತ್ತಿದ್ದು ಮತ್ತು ಅನಾರೋಗ್ಯದಿಂದ
ಬಳಲುತ್ತಿರುವ ರೋಗಿಗಳಿಗೆ ರಕ್ತದಾನ ಮಾಡುವುದರಿಂದ ಪ್ರಾಣಾಪಯದಿಂದ ತಪ್ಪಿಸಬಹುದು ಎಂದು ಶ್ರೀ ರಾಘವೇಂದ್ರ ಆಸ್ಪತ್ರೆಯ ಮುಖ್ಯಸ್ಥ ಡಾ. ಮಲ್ಲೇಶ್ ತಿಳಿಸಿದರು.
ಪಟ್ಟಣದ ಕೆಜಿಎಫ್ ಮುಖ್ಯರಸ್ತೆಯ ಶ್ರೀ ರಾಘವೇಂದ್ರ ಆಸ್ಪತ್ರೆ ಮತ್ತು ಕೋಲಾರದ
ಲಯನ್ಸ್ ರಕ್ತನಿಧಿ ಕೇಂದ್ರ ಹಾಗೂ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಡಾ. ಮಲ್ಲೇಶ್ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿನ ಕೊಬ್ಬಿನಾಂಶ ಕ್ಷೀಣಿಸುತ್ತದೆ ಮತ್ತು ದೇಹದಲ್ಲಿ ರಕ್ತ ಉತ್ಪತ್ತಿಯಾಗುತ್ತದೆ. ಅಲ್ಲದೇ, ಇನ್ನೊಬ್ಬರ ಜೀವವನ್ನು ಉಳಿಸಬಹುದು ಎಂದರು.
ಸಾರ್ವಜನಿಕರು ಮಧುಮೇಹ, ರಕ್ತದೊತ್ತಡ, ಕಣ್ಣಿನ ಪರೀಕ್ಷೆ, ಹೃದಯರೋಗ ತಪಾಸಣೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯರಿಂದ ಸಲಹೆ ಪಡೆದರು. ರಕ್ತದಾನ ಶಿಬಿರದಲ್ಲಿ ಅನೇಕ ಸಾರ್ವಜನಿಕರು ಮತ್ತು ಯುವಕರು ಹಾಗೂ ಸರ್ಕಾರಿ ನೌಕರರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಆಸ್ಪತ್ರೆ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಪ್ರತಿಭಾ, ಡಾ, ಲಕ್ಷ್ಮೀ, ಡಾ, ಚೇತನ, ಡಾ.ಹೇಮಂತ್,ಮತ್ತು ಸಿಬ್ಬಂದಿ ವರ್ಗದವರು ಹಾಗೂ ನೂರಾರು ಸಾರ್ವಜನಿಕರು ಬಾಗವಹಿಸಿದ್ದರು.
ಬೇತಮಂಗಲದ ಶ್ರೀ ರಾಘವೇಂದ್ರ ಆಸ್ಪತ್ರೆ ಮತ್ತು ಲಯನ್ಸ್ ರಕ್ತನಿದಿ ಕೇಂದ್ರ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.