ಬಳ್ಳಾರಿ,ಜೂ.18:ಬಳ್ಳಾರಿ ನಗರೆ ನಲ್ಲಚೆರುವಿನ ಪಿಯು ಕಾಲೇಜಿನ ಪ್ರಾಂಶುಪಾಲರಾಗಿದ್ದ ಅವಿವಾಹಿತ ಮೋಹನ ರೆಡ್ಡಿ (೫೯) ಅವರು ಭಾನುವಾರ ಸಂಜೆ ತೀವ್ರ ಹೃದಯಾಘಾತದಿಂದ ಕೊಪ್ಪಳದಲ್ಲಿರುವ ಸಹೊದರಿಯ ಮನೆಯಲ್ಲಿ ನಿಧನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ಅವರ ಸ್ವಂತ ಊರಾದ ಗೊಲ್ಲ ಲಿಂಗಮ್ಮನಹಳ್ಳಿಯಲ್ಲಿ ಸೋಮವಾರ ನೆರವೇರಲಿದೆ.
ಮೃತರು ಅಪಾರ ಸಂಖ್ಯೆಯ ಮಿತ್ರರು, ಬಂಧುವರ್ಗ ಹಾಗೂ ವಿದ್ಯಾರ್ಥಿಗಳನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಕಾಲೇಜಿಗೆ ಸೋಮವಾರ ರಜೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪರಿಸರಪ್ರೇಮಿ, ಕಲಾವಿದರು ಮತ್ತು ಸಾಹಿತಿಗಳು ಆಗಿದ್ದ ಮೃತರ ಆತ್ಮಕ್ಕೆ ಶಾಂತಿಕೋರಿ ನಟರು, ಸಾಹಿತಿಗಳು, ಪರಿಸರ ಪ್ರೇಮಿಗಳು, ವಿದ್ಯಾರ್ಥಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.