ಸುದ್ದಿಮೂಲ ವಾರ್ತೆ
ರಾಯಚೂರು,ಜೂ.19:ಅನ್ಯಭಾಗ್ಯ ಯೋಜನೆಯ 10 ಕೆ.ಜಿ ಅಕ್ಕಿಗೆ ಎಲ್ಲಾ ಪ್ರಯತ್ನ ನಡೆದಿದೆ ಕೇಂದ್ರ ಸರ್ಕಾರದ ವಿರುದ್ದ ನಾನು ನೇರವಾದ ಆರೋಪ ಮಾಡುತ್ತೇನೆ ಎಂದು ವೈದ್ಯಕಿಯ ಖಾತೆ ಸಚಿವ ಡಾ. ಶರಣಾಪ್ರಕಾಶ್ ಪಾಟೀಲ್ ಹೇಳಿದರು.
ಅವರು ರಾಯಚೂರು ನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ ಕೆಂದ್ರ ಸರ್ಕಾರ ಅನಾವಶ್ಯಕ ರಾಜಕೀಯ ಮಾಡುತ್ತಿದೆ ಕಾಂಗ್ರೆಸ್ ಪಕ್ಷ 10 ಕೆ.ಜಿ ಅಕ್ಕಿ ಕೊಡುವ ಭಾಷೆ ಕೊಟ್ಟಿತ್ತು ಬಿಜೆಪಿ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಪ್ರಯತ್ನ ಮಾಡುತ್ತಿದೆ ಇದು ಖಂಡನೀಯ ಎಂದರು.
ಎಲ್ಲಾ ಪ್ರಯತ್ನದೊಂದಿಗೆ ಬೇರೆ ರಾಜ್ಯಗಳಿಂದ ಅಕ್ಕಿ ತರುತ್ತೇವೆ ಎಫ್ ಸಿ ಐ ನಿಂದ ಕೊಡುತ್ತೆವೆ ಅಂತ ಹೇಳಿ ಕೇಂದ್ರ ಸರ್ಕಾರ ಹಿಂದಕ್ಕೆ ಹೋಗಿದ್ಯಾಕೆಸೋತಿರುವುದರಿಂದ ಕ್ಷುಲ್ಲಕ ಭಾವನೆಯಿಂದ ಬಿಜೆಪಿ ರಾಜಕೀಯ ಮಾಡುತ್ತಿದೆ
ಇದಕ್ಕೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕು ಒಂದು ಗ್ರಾಂ ಅಕ್ಕಿ ಕಡಿಮೆ ಕೊಟ್ಟರು ಹೋರಾಟ ಮಾಡುತ್ತೇವೆ ಅನ್ನೋ ಬಿಜೆಪಿಗೆ ನಾಚಿಕೆ ಬರಬೇಕು
ರೈತರ ಸಲಹೆಗಳನ್ನ ನಾವು ಸ್ವೀಕರಿಸುತ್ತೇವೆ ಎಂದರು.
ಜೂನ್ ತಿಂಗಳಿಂದ ಉಚಿತ ವಿದ್ಯುತ್ ಜಾರಿ ಮಾಡುತ್ತಿದ್ದು ಆಗಸ್ಟ್ ತಿಂಗಳ ಬಿಲ್ ಉಚಿತವಾಗಿರುತ್ತದೆ,ಗೃಹಲಕ್ಷ್ಮಿ ಯೋಜನೆ ಆಗಸ್ಟ್ 15 ರಿಂದ ಜಾರಿಗೆ ವಾಗ್ದಾನವಿದ್ದು ತಯಾರಿ ನಡೆದಿದೆ
ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ
ಸರ್ವರ್ ಸಮಸ್ಯೆಯಾಗಿದೆ ಸರಿಪಡಿಸುತ್ತೇವೆ ಎಂದರು.
ವಿದ್ಯುತ್ ದರ ಹೆಚ್ಚಿಸಲು ಕೆಆರ್ಸಿಗೆ ಪ್ರಸ್ತಾವನೆ ಕೊಟ್ಟಿದ್ದು ಹಿಂದಿನ ಸರ್ಕಾರಸಾಮಾನ್ಯ ಜನರ ಹೊರೆಯನ್ನ ಸರ್ಕಾರ ತೆಗೆದುಕೊಳ್ಳುತ್ತಿದೆ
ಸಮಸ್ಯೆಯನ್ನು ಸೃಷ್ಟಿ ಮಾಡಿದ್ದು ಹಿಂದಿನ ಬಿಜೆಪಿ ಸರ್ಕಾರಆಗಸ್ಟ್ ತಿಂಗಳಿಂದ ನಾವು ಉಚಿತ ವಿದ್ಯುತ್ ಕೊಡುತ್ತಿದ್ದೇವೆರಾಜ್ಯದಲ್ಲಿ 99% ಜನ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೆಎಂದರು.