ಸುದ್ದಿಮೂಲವಾರ್ತೆ
ಕೊಪ್ಪಳ ಜೂ 19:ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ 200 ಯುನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಜಾರಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಕಾರ್ಯ ಆರಂಭವಾಗಿದೆ. ಆದರೆ ಗೃಹ ಜ್ಯೋತಿ ಅರ್ಜಿಯ ಸರ್ವರ್ ಡೌನ್ ಇದ್ದು. ಅರ್ಜಿ ಸಲ್ಲಿಸಲು ಬಂದವರು ಪರದಾಡುವಂತಾಗಿದೆ. ಅರ್ಜಿ ಸಲ್ಲಿಸುವದಕ್ಕಾಗಿ ದಿನವಿಡೀ ಕಾಯಿಯುವಂತಾಗಿದೆ.
ಕಾಂಗ್ರೆಸ್ ಸರಕಾರ ಚುನಾವಣೆಯ ಮುನ್ನ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಈ ಗ್ಯಾರಂಟಿ ಯೋಜನೆಗಳನ್ನು ನಂಬಿ ಜನ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದೆ. ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರವು ಒಂದೊಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈಗಾಗಲೇ ಮಹಿಳೆಯರು ಬಸ್ ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಳಿಸಿದೆ. ಈ ಮಧ್ಯೆ ಆಗಷ್ಟ ತಿಂಗಳಿನಿಂದ ಗೃಹ ಬಳಕೆಯ 200 ಯುನಿಟ್ ವರೆಗೂ ಉಚಿತ ವಿದ್ಯುತ್ ನೀಡಲು ಭಾನುವಾರದಿಂದ ಆನ್ ಲೈನ್ ಅರ್ಜಿ ಸಲ್ಲಿಸುವ ಕಾರ್ಯ ಆರಂಭಿಸಿದೆ. ಯುನಿಟ್ ವರೆಗೆ ವಿದ್ಯುತ್ ನ್ನು ಉಚಿತವಾಗಿ ಪಡೆಯಲು ನಿನ್ನೆಯಿಂದಲೇ ಹಲವರು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ್ ಒನ್. ನೆಮ್ಮದಿ. ಗ್ರಾಮ ಒನ್ ಹಾಗು ನೆಟ್ ಸೆಂಟರ್ ಗಳಲ್ಲಿ ಜನ ಅರ್ಜಿ ಹಾಕಲು ಬಂದಿದ್ದಾರೆ. ನೆಟ್ ಸೆಂಟರ್ ನಲ್ಲಿ ಸೇವಾ ಸಿಂಧು ಆಪ್ ನಲ್ಲಿ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಇನ್ನೂ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಇಲ್ಲಿಯವರೆಗೂ ಕೇವಲ 5 ಜನರ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಾಗಿ ನೂರಾರು ಜನ ಕರ್ನಾಟಕ ಒನ್ ಕೇಂದ್ರದಲ್ಲಿ ಕಾಯಿಯುತ್ತಿದ್ದಾರೆ. ಇಲ್ಲಿ ಆಧಾರ ಕಾರ್ಡ್ ನಲ್ಲಿ ಬದಲಾವಣೆಗಾಗಿ ಕೆಲವರು ಕಾಯಿಯುತ್ತಿದ್ದು ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಅಪಲೋಡ್ ಆಗದೆ ಜನರು ಪರದಾಡುವಂತಾಗಿದೆ. ಅರ್ಜಿ ಸಲ್ಲಿಸುವ ಸರ್ವರ್ ಗೆ ಬೇರೆ ಸರ್ವರ್ ಗಳ ಲಿಂಕ್ ಕೊಡಬೇಕು ಅಲ್ಲದೆ ಸರ್ವರ್ ನ್ನು ಬಲಪಡಿಸಬೇಕೆಂದು ಜನತೆ ಹೇಳುತ್ತಿದ್ದಾರೆ.