ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.20: ಬಿಜೆಪಿ ಬಾಯಿ ಬಡಕರು ಮಾತನಾಡೋದು ಬಿಟ್ಟರೆ ರಾಜ್ಯದ ಜನತೆಯ ಹಿತಾಸಕ್ತಿ ಇಲ್ಲ. ಮುಂದಿನ ಲೋಕಸಭೆಗೆ ಬಿಜೆಪಿಯವರಿಗೆ ಪಾಠ ಕಲಿಸುತ್ತಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಇಂದು ಕೊಪ್ಪಳದ ಅಶೋಕ ವೃತ್ತದಲ್ಲಿ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆಯಲ್ಲಿ ಮಾತನಾಡಿ ನಾವು ಅಧಿಕಾರಕ್ಕೆ ಬರುವಾಗ ನಾವು ಬಡವರಿಗೆ ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ನಾವೇನು ಕಾರ್ಪೋರೇಟ್ ಸಂಸ್ಥೆಗಳಿಗೆ ಗ್ಯಾರಂಟಿ ನೀಡಿಲ್ಲ. ಈಗಾಗಲೇ ಗ್ಯಾರಂಟಿ ಯೋಜನೆಯ ನಂತರ ಬಿಜೆಪಿಯವರಿಗೆ ನಡುಕ ಉಂಟಾಗಿದೆ. ಹತ್ತು ವರ್ಷ ಅಧಿಕಾರದಿಂದ ದೂರವಾಗುತ್ತದೆ ಎಂಬ ಭಯ ಹುಟ್ಟಿದೆ. ಎಫ್ ಸಿಐ ಗೋಡಾನದಲ್ಲಿ ಅಕ್ಕಿ ಕೊಳೆಯುತ್ತಿದೆ. ಅದನ್ನು ನೀಡುತ್ತಿಲ್ಲ. ಈಗ ನಳಿನ ಕುಮಾರ ಕಟೀಲ ಅನ್ನಭಾಗ್ಯ ಯೋಜನೆ ಘೋಷಣೆ ಮಾಡುವಾಗ ನಮ್ಮನ್ನು ಕೇಳಿದ್ದಿರೇನು ಅನ್ನುತ್ತಾರೆ. ಆದರೆ ನಿಮ್ಮ ನಾಯಕರು ಕಪ್ಪು ಹಣ ತಂದು ತಲಾ 15 ಲಕ್ಷ, 2 ಕೋಟಿ ನೀಡುತ್ತಿನಿ ಎಂದಿದ್ದಾರೆ. ಈಗ ಯಾಕೆ ಜಾರಿಯಾಗಿಲ್ಲ ಎಂದರು.
ಯೋಜನೆಗಳಿಗೆ ಅಡ್ಡಿಯಾಗುತ್ತಾರೆ. ರಾಜ್ಯದಿಂದ 25 ಜನ ಸಂಸದರನ್ನು ಕಳುಹಿಸಿದ್ದೇವೆ. ಕೈಮುಗಿಯುತ್ತಿವಿ ಕೇಂದ್ರಕ್ಕೆ ಹೋಗಿ ಬಡವರ ಪರ ಯೋಜನೆಗೆ ಅಕ್ಕಿ ಕೊಡಿಸಿ ಎಂದರು. ಸಿದ್ದರಾಮಯ್ಯ ಹೇಳಿದಂತೆ ಎಲ್ಲಾ ಗ್ಯಾರಂಟಿ ಯೋಜನೆಯನ್ನು ನಿಗಿದಿತ ಸಮಯಕ್ಕೆ ಜಾರಿಗೊಳಿಸುತ್ತೇವೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರನ್ನು ಓಡಾಡಿಸಿ ಸೋಲಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ 28 ಸ್ಥಾನವನ್ನು ಕಾಂಗ್ರೆಸ್ ಗೆಲ್ಲುತ್ತದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಕೇವಲ 65 ಸ್ಥಾನ ಗೆದ್ದಿದ್ದಾರೆ. ಲೋಕಸಭೆಯಲ್ಲಿ ಇವರನ್ನು ಮನೆಗೆ ಕಳುಹಿಸುತ್ತಾರೆ ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ವೈಫಲ್ಯವನ್ನು ಪ್ರಚಾರ ಮಾಡಬೇಕು ಎಂದರು.
ಸಿದ್ದರಾಮಯ್ಯ ಚುನಾವಣೆಯ ಮುನ್ನ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದರು. ಆದರೆ ಕಾಂಗ್ರೆಸ್ ಸರಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಕಾರಣಕ್ಕೆ ಅಕ್ಕಿ ಕೊಡುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿ ರಾಜಕೀಯ ಮಾಡುತ್ತಿದೆ. ಬಡವರಿಗೆ ನೀಡುವ ಯೋಜನೆಗಳಿಗೆ ಬಿಜೆಪಿಯವರು ವಿರೋಧ ಮಾಡ್ತಾರೆ ಆದರೆ ಬಡವರಿಗೆ ನೀಡುವ ಯೋಜನೆಗೆ ಅಡ್ಡಗಾಲು ಹಾಕಬಾರದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ರಾಜಶೇಖರ ಹಿಟ್ನಾಳ ಹೇಳಿದರು.
ಈ ಸಂದರ್ಭದಲ್ಲಿ ವಿಶ್ವನಾಥ ರಡ್ಡಿ, ಕಿಶೋರಿ ಬುದನೂರು. ಮಾಲತಿ ನಾಯಕ. ಜ್ಯೋತಿ ಗೊಂಡಬಾಳ.ಇಂದಿರಾ ಬಾವಿಕಟ್ಟಿ. ಕೃಷ್ಣಾರಡ್ಡಿ ಗಲಬಿ, ಕಾಟನ್ ಪಾಷಾ ಸೇರಿ ಹಲವರು ಇದ್ದರು.