ಬೆಂಗಳೂರು,ಜೂ.21 : ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್
ಮತ್ತು ವ್ಯಾಸ್ಕುಲರ್ ಡಿವಿಷನ್, ಅಮೆರಿಕಾ ಇವರ ಸಹಭಾಗಿತ್ವದೊಂದಿಗೆ ಎಲ್ಲಾ ಹೃದ್ರೋಗಿಗಳಿಗೂ ಸ್ಟಂಟ್ಗಳ ಉಚಿತ ಅಳವಡಿಸಲಾಗಿದೆ.
ಈ ಕಾರ್ಯಗಾರದಲ್ಲಿ ಚಿಕಿತ್ಸೆ ಪಡೆದವರೆಲ್ಲರೂ ಬಡರೈತರು, ದಿನಗೂಲಿ ನೌಕರರು, ಆಟೋರಿಕ್ಷಾ
ಚಾಲಕರು, ಬೀದಿಬದಿಯ ಕಾರ್ಮಿಕರು ಹಾಗೂ ನಿಸ್ಸಹಾಯಕ ಹಿರಿಯ ನಾಗರೀಕರು.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು, ಮೈಸೂರು
ಹಾಗೂ ಕಲಬುರಗಿ ಶಾಖೆಯ ಹೃದ್ರೋಗಿಗಳಿಗೆ ಕೇವಲ 7 ದಿನಗಳಲ್ಲಿ ಕಡುಬಡವರು ಮತ್ತು ನಿಸ್ಸಹಾಯಕ 225 ಬಡರೋಗಿಗಳಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು
ಯಶಸ್ವಿಯಾಗಿ ಮಾಡಲಾಯಿತು. ಈ ಎಲ್ಲಾ ರೋಗಿಗಳಿಗೂ ಸ್ಟಂಟ್ಅನ್ನು ಉಚಿತವಾಗಿ ಅಳವಾಡಿಸಲಾಗಿದೆ.
ರಾಜ್ಯದ ಹೃದ್ರೋಗಿಗಳನ್ನೊಳಗೊಂಡಂತೆ ಪಶ್ಚಿಮ ಬಂಗಾಳ, ಆಂಧ್ರ ಮತ್ತು ತಮಿಳುನಾಡು,
ತೆಲಾಂಗಾಣರವರಿಗೂ ಚಿಕಿತ್ಸೆ ನೀಡಲಾಯಿತು.
ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ರವರ ಪ್ರಕಾರ, 225 ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಕೇವಲ 7 ದಿವಸಗಳಲ್ಲಿ ಮಾಡುವುದು ಒಂದು ಬೃಹತ್ ಸಾಧನೆ. ಈ ಅಸಾಧಾರಣ ಕಾರ್ಯಾಗಾರವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ 17 ಕ್ಯಾತ್ಲ್ಯಾಬ್, 120 ನುರಿತ ಸಂಸ್ಥೆಯ ವೈದ್ಯರು ಹಾಗೂ
ತಂತ್ರಜ್ಞರು ಮತ್ತು ಶುಶ್ರೂಷಕರು, ಡಿ-ದರ್ಜೆ ನೌಕರರ ಕೌಶಲ್ಯತೆ ಮತ್ತು ಗುಣಮಟ್ಟದ
ಮೂಲಭೂತ ಸೌಕರ್ಯದ ಪೂರೈಕೆಯಿಂದ ಇದು ಸಾಧ್ಯವಾಗಿದೆ. ಅಲ್ಲದೇ
ಎಲ್ಲರ ಕಾರ್ಯದಕ್ಷತೆ ಮತ್ತು ಸಮರ್ಪಣಾ ಭಾವದ ಸೇವೆಯೇ ಕಾರಣವಾಗಿದೆ.
ಎಲ್ಲ ರೋಗಿಗಳು ಬಡರೈತರು, ದಿನಗೂಲಿ ನೌಕರರು, ಬೀದಿಬದಿಯ ಕಾರ್ಮಿಕರು ಹಾಗೂ ನಿಸ್ಸಹಾಯಕ ಹಿರಿಯ ನಾಗರೀಕರಾಗಿರುತ್ತಾರೆ. ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್,
ಇಲಿನಾಯಿಸ್, ಅಮೇರಿಕಾ ಮತ್ತು ಮೆಡ್ಟ್ರಾನಿಕ್ ವ್ಯಾಸ್ಕುಲರ್ ಡಿವಿಷನ್, ಅಮೇರಿಕಾ ಸಂಸ್ಥೆಗಳು ಕಾರ್ಯಾಗಾರಕ್ಕೆ ಸ್ಟಂಟ್ಗಳ ಉದಾರವಾಗಿ ನೀಡಿದ್ದಾರೆ.
ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಹೃದಯಾಘಾತಕ್ಕೆ ಸಂಬಂಧಿತ ಕಾಯಿಲೆಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಬಡವ ಬಲ್ಲಿದನೆಂಬ ಬೇದಭಾವವಿಲ್ಲದೆ ಜನರ ಆತಂಕಕ್ಕೆ ಕಾರಣವಾಗಿದೆ.
ಈ ಕಾರ್ಯಾಗಾರದಲ್ಲಿ ಸ್ಟಂಟ್ ಹಾಕಿಸಿಕೊಂಡ 31 ವರ್ಷದ ದಿನಗೂಲಿ ರೈತಾಪಿ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದು, 85 ವರ್ಷದ ಅಶಕ್ತ ಹಿರಿಯ ನಾಗರೀಕರಿರುತ್ತಾರೆ. ಶೇಕಡಾ 25% ರಷ್ಟು ರೋಗಿಗಳು 50 ವರ್ಷಕ್ಕೂ ಕಡಿಮೆ ವಯಸ್ಕರಾಗಿದ್ದಾರೆ ಹಾಗೂ ಶೇಕಡಾ 78% ರೋಗಿಗಳು ಗಂಡಸರು ಮತ್ತು ಉಳಿದವರು ಹೆಂಗಸರು. ಚಿಕಿತ್ಸೆ ಪಡೆದ 225 ರೋಗಿಗಳಲ್ಲಿ ಶೇ. 50% ಮಂದಿಗೆ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ – ಶೇ. 53%, ಧೂಮಪಾನ – ಶೇ. 36% ರಷ್ಟು ಹಾಗೂ ಅಧಿಕ ಕೊಲೆಸ್ಟ್ರಾಲ್ – ಶೇ. 30% ಕಂಡುಬಂದಿದೆ.
ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆದ ರೋಗಿಗಳೊಡನೆ ಮಾತನಾಡಿ, ಸೂಚಿಸಿರುವಂತಹ ಬ್ಲಡ್ ತಿನ್ನಿಂಗ್ ಮಾತ್ರೆಗಳನ್ನು ನಿಲ್ಲಿಸಬಾರದು., ನಿಲ್ಲಿಸಿದಲ್ಲಿ ಮತ್ತೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು. ಅಲ್ಲದೇ
ರಕ್ತದೊತ್ತಡ ಮತ್ತು ಸಕ್ಕರೆ ಅಂಶದಲ್ಲಿ ನಿಯಂತ್ರಣ, ಹೆಚ್ಚಿನ ತರಕಾರಿ ಮತ್ತು ಹಣ್ಣುಗಳ ಸೇವನೆ ಮತ್ತು ದಿನನಿತ್ಯ ವ್ಯಾಯಾಮವನ್ನು ಮಾಡಲು ಸೂಚಿಸಿದರು.