ಸುದ್ದಿಮೂಲ ವಾರ್ತೆ
ತಿಪಟೂರು,ಜೂ.22 : ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಚಂದ್ರಶೇಖರನಾಥ ಸ್ವಾಮೀಜಿ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸತ್ಯನಾರಾಯಣ ಸ್ವಾಮಿಯ ಪೂಜೆ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಚೌಡೇಶ್ವರಿ ದೇವಾಲಯದಲ್ಲಿ
ಪ್ರತಿವರ್ಷದ ಆಷಾಡ ಮಾಸದಲ್ಲಿ ಲೋಕಕಲ್ಯಾಣಾರ್ಥವಾಗಿ ಆಯೋಜಿಸಲಾಗುವ 11ನೇ ವರ್ಷದ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ ಅತಿವೃಷ್ಟಿ- ಅನಾವೃಷ್ಟಿ ಸಂಭವಿಸದೇ ಜನರು ಶಾಂತಿ, ನೆಮ್ಮದಿ ಜೀವನ ನಿರ್ವಹಣೆ ಮಾಡುವಂತಾಗಲಿ. ಮಾನವನ ಸ್ವಾರ್ಥಕ್ಕಾಗಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ಮಾನವನ ಆವಿಷ್ಕಾರಗಳಿಗೆ ಪ್ರತಿಯಾಗಿ ಪ್ರಕೃತಿ ವಿಕೋಪಗಳು
ಸಂಭವಿಸಿ ಅತಿವೃಷ್ಟಿ-ಅನಾವೃಷ್ಟಿ ಉಂಟಾಗುತ್ತಿದೆ.
ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಉತ್ತಮ ಮಳೆ-ಬೆಳೆ ಆಗಲಿ. ಪ್ರಕೃತಿಯ ವೈಪರಿತ್ಯ, ಬದಲಾವಣೆಗಳ ಮುಂದೆ ಮಾನವನ ಆಲೋಚನೆ, ಅಭಿವೃದ್ಧಿ ಚಿಂತನೆಗಳು ನಡೆಯುವುದಿಲ್ಲ. ಇಂತಹ
ಘಟನೆಗಳು ನಡೆಯದಂತಿರಲಿ ಎಂಬ ಉದ್ದೇಶದಿಂದ ಲೋಕಕಲ್ಯಾಣಾರ್ಥವಾಗಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಲೆರಾಂಪುರ ಮಠದ ಡಾ.ಹನುಮಂತನಾಥ ಸ್ವಾಮೀಜಿ, ಆದಿಚುಂಚನಗಿರಿ ಅಮೆರಿಕಾ ಶಾಖಾಮಠದ ಶ್ರೀಶೈಲ ಸ್ವಾಮೀಜಿ, ಯಲಹಂಕ ಮಠದ ಡಾ.ಅರುಣ್ ಗುರೂಜಿ, ಕುಣಿಗಲ್ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಹಾಸನದ ಉದ್ಯಮಿ ವಿಜಯ ಕುಮಾರ್ಸೇರಿದಂತೆ ದಸರೀಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು.