ಸುದ್ದಿಮೂಲವಾರ್ತೆ
ಕೊಪ್ಪಳ ಜೂ 22:ವಿದ್ಯುತ್ ಬಿಲ್ ಏರಿಕೆ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಬಂದ್ ಗೆ ವರ್ತಕರಿಂದ ಬೆಂಬಲ ವ್ಯಕ್ತವಾಗಿದೆ.
ಕೈಗಾರಿಕೆಗಳಿಗೆ, ಸಣ್ಣ ಉದ್ಯಮಿಗಳಿಗೆ, ಕೃಷಿ ಆಧಾರಿತ ಉದ್ಯಮಗಳಿಗೂ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಿದೆ. ಈ ಹಿನ್ನೆಲೆಯಲ್ಲಿ ವರ್ತಕರು ವಿವಿಧ ವ್ಯಾಪಾರ ಸಂಘಟನೆಗಳೊಂದಿಗೆ ಸಾಂಕೇತಿಕ ಬೆಂಬಲ ವ್ಯಕ್ತಪಡಿಸಿ ಮೆರವಣಿಗೆ ನಡೆಸಿದರು.
ವರ್ತಕ ಸಂಘದಿಂದ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ನಗರದ ಗಡಿಯಾರ ಕಂಬದ ಬಳಿ ಪ್ರತಿಭಟನೆ ಆರಂಭಿಸಿ ಇಂಧನ ಸಚಿವರು ಹಾಗೂ ಸಿಎಂ ವಿರುದ್ಧ ಘೋಷಣೆ ಹಾಕಿದರು.
ವಿದ್ಯುತ್ ಬಿಲ್ ಹೆಚ್ಚಾಗಿದೆ ಕಡಿಮೆ ಮಾಡಲು ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಶ್ವಿನ್ ಜಾಂಗಡಾ, ಸಿದ್ದಣ್ಣ ನಾಲವಾಡದ ಸೇರಿ ಹಲವರು ಇದ್ದರು.