ಯಡಿಯೂರಪ್ಪ ಧರಣಿ ನಡೆಸುವ ಬದಲು ಕೇಂದ್ರದ ಮೇಲೆ ಅಕ್ಕಿ ಕೊಡಲು ಒತ್ತಡ ಹಾಕಲಿ: ಬೋಸರಾಜು
ಸುದ್ದಿಮೂಲ ವಾರ್ತೆ, ಮೈಸೂರು, ಜೂ 27
ಮಾಜಿ ಮುಖ್ಯಮಂತ್ರಿ. ಯಡಿಯೂರಪ್ಪನವರು ಅತ್ಯಂತ ಹಿರಿಯರಾಗಿದ್ದಾರೆ. ಗ್ಯಾರಂಟಿಗಳನ್ನು ಈಡೇರಿಸದಿದ್ದರೆ ಸದನ್ ಒಳಗೆ ಹೊರಗೆ ಧರಣೆ ಮಾಡಲಾಗುವುದು ಎಂದು ಹೇಳಿರುವುದು ಸರಿಯಲ್ಲ. ಆದರ ಬದಲಿಗೆ ರಾಜ್ಯದ ಬಡಜನತೆಗೆ ಅಕ್ಕಿ ಕೊಡಲು ಕೇಂದ್ರದ ಒತ್ತಡ ಹೇರಬೇಕು ಎಂದು ಸಣ್ಣ ನೀರಾವರಿಮ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬೋಸರಾಜು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅವರು ಈ ರೀತಿ ಮಾತನಾಡಬಾರದು.
ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ಕೊಡಿ ಅಂತ ಯಡಿಯೂರಪ್ಪ ಕೇಳಬೇಕು. ಶೋಭಾ ಕರಂದ್ಲಾಜೆ ಕೂಡ ಹೇಳಿಕೆ ನೀಡಿ ಗ್ಯಾರಂಟಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಸದ್ದಾರೆ.ಅದೇ ಅದೇ ರೀತಿ ಯಡಿಯೂರಪ್ಪನವರು ಹೇಳಬೇಕಲ್ವೇ. ? ಎಂದು ಪ್ರಶ್ನಿಸಿದರು.
ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಇದ್ದಾಗ 7ಕೆಜಿ ಅಕ್ಕಿ ಕೊಡಲಾಗಿತ್ತು. ಅದನ್ನ ಬಿಜೆಪಿ ಅವರು 5 ಕೆಜಿ ಗೆ ತಂದರು.ಈಗ ನಾವು 10ಕೆಜಿ ಕೊಡ್ತೀವಿ ಅಂತ ಹೇಳಿದ್ದೀವಿ ಅದಕ್ಕೆ ಬಿಜೆಪಿ ಸಹಕಾರ ಕೊಡಬೇಕು ಪ್ರಧಾನಿ. ಮೋದಿಯವರ ಮನೆಯಿಂದ ಅಥವಾ ಇನ್ಯಾರೋ ಮನೆಯಿಂದ ಕೊಡುವುದಿಲ್ಲ. ಈಗಾಗಲೇ ಕೇಂದ್ರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನು ಇದೆ.
ಅದರಲ್ಲಿ ಹೆಚ್ಚುವರಿ ಅಕ್ಕಿ ಕೊಡಿ ಅಂತ ಕೇಳಿದ್ದೇವೆ. ಎಂದು ಹೇಳಿದರು.
ಯಡಿಯೂರಪ್ಪನವರು ಹಿರಿಯರು,ಗೌರವಸ್ಥರು,ದೊಡ್ಡನಾಯಕರಿದ್ದಾರೆ ಅವರ ಬಗ್ಗೆ ಗೌರವವಿದೆ. ಈಗ ರಾಜ್ಯದಲ್ಲಿ ಬಿಜೆಪಿಯನ್ನು ಜನ ತಿರಸ್ಕಾರ ಮಾಡಿದ್ದಾರೆ. ಬದಲಾವಣೆ ಬಯಸಿ ಕಾಂಗ್ರೆಸ್ ಗೆ 135 ಸ್ಥಾನ ಕೊಟ್ಟಿದ್ದಾರೆ.ಇತ್ತೀಚಿನ ಕಾಲದಲ್ಲಿ ಯಾವುದೇ ಪಕ್ಷಕ್ಕೂ ಇಷ್ಟೊಂದು ಬಹುಮತ ಕೊಟ್ಟಿಲ್ಲ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಅದರಲ್ಲಿ ತಕ್ಷಣ 5ಗ್ಯಾರಂಟಿಯನ್ನ ಅನುಷ್ಠಾನಕ್ಕೆ ತರಲು ಮುಂದಾಗಿದ್ದೇವೆ ಎಂದರು.
ಈಗಾಗಲೇ ಶಕ್ತಿ ಯೋಜನೆ ಆರಂಭವಾಗಿದೆ. ಶಕ್ತಿ ಯೋಜನೆಗೆ ನೆನ್ನೆ ಒಂದೇ ದಿನ 1.5ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆ ಜಾರಿಗೆ ಸಿದ್ಧತೆ ನೀಡಿದೆ. ಆಪ್ ಕೂಡ ರೆಡಿ ಆಗಿದೆ. ನಾಳೆಯಿಂದ ಅರ್ಜಿ ಸಲ್ಲಿಕೆಗೆ ಚಾಲನೆ ಸಿಗಲಿದೆ.ಆಗಸ್ಟ್ 15ರ ನಂತರ ಮನೆ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯಡಿ ಖಾತೆಗೆ ಹಣ ಹಾಕಲಾಗುತ್ತದೆ. ಒಟ್ಟಾರೆ ಕಾರ್ಯಕ್ರಮಗಳನ್ನು ಜಾರಿ ಮಾಡಲು ಬದ್ದ.10ಕೆಜಿ ಅಕ್ಕಿ ನೀಡುವ ಯೋಜನೆಗೆ ಕೇಂದ್ರದವರು ಕೊಕ್ಕೆ ಹಾಕಿದ್ದಾರೆ ಎಂದು ಟೀಕಿಸಿದ್ದಾರೆ.
ಆದರೆ ರಾಜಕೀಯ ಕಾರಣಗಳಿಂದ ಅಕ್ಕಿ ಕೊಡುತ್ತಿಲ್ಲ.ಕರ್ನಾಟಕದ ಬಡ ಜನರ ಬಗ್ಗೆ ಬಿಜೆಪಿಗೆ ಇರುವ ವಿರೋಧ ಕಣ್ಣಿಗೆ ಕಾಣುತ್ತಿದೆ. ನಾವು ಹೇಗಾದರೂ ಮಾಡಿ ಅಕ್ಕಿಯನ್ನು ನೀಡಿ ಜನರಿಗೆ ನೀಡಿರುವ ಭರವಸೆ ಈಡೇರಿಸುತ್ತೇವೆ ಎಂದು ಪ್ರತಿಪಾದನೆ ಮಾಡಿದರು.