ಸುದ್ದಿಮೂಲ ವಾರ್ತೆ
ತಿಪಟೂರು, ಜೂ 26 : ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳನ್ನು ನೆನಪಿಸುವಂತೆ ತಿಪಟೂರು ತಾಲೂಕು ಹೊನ್ನವಳ್ಳಿ ಹೋಬಳಿಯ
ಹಾಲ್ಕುರಿಕೆಯ ತರಳಬಾಳು ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಶಾಲಾ ಚುನಾವಣಾ ಚಟುವಟಿಕೆಗಳನ್ನು ನಡೆಸಲಾಯಿತು.
ಈ ಮೂಲಕ ಮಕ್ಕಳಿಗೆ ದೇಶದ ಪ್ರಜಾಪ್ರಭುತ್ವ ಹಾಗೂ ಮತದಾರರೇ ಪ್ರಭುಗಳು ಎಂಬ ಮತದಾರರ ಮೌಲ್ಯವನ್ನು ಅರ್ಥ ಮಾಡಿಸಿದ ವಿಶಿಷ್ಟ ಘಟನೆಗಳಿಗೆ ಸಾಕ್ಷಿಯಾಯಿತು. ಶಾಲೆಯ ಮುಖ್ಯೋಪಾಧ್ಯಾಯ ವಿಜಯ್ಕುಮಾರ್ ಹೆಚ್.ಬಿ ಚುನಾವಣಾ ವೀಕ್ಷಕರಾಗಿ
ಭಾಗವಹಿಸಿ ಮಾತನಾಡಿ, ಮತದಾರರು ದೇಶ, ರಾಜ್ಯ, ಜಿಲ್ಲೆ, ನಗರ ಗ್ರಾಮವೆಂಬ ಎಲ್ಲಾ ಸ್ಥಳದಲ್ಲಿಂದಲೂ ವ್ಯವಸ್ಥಿತವಾದ ನಾಯಕತ್ವ ಹಾಗೂ ಆಡಳಿತಕ್ಕೆ ಅತಿ
ಅವಶ್ಯಕರು. ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಅರಿವನ್ನು ನೀಡುವುದು ಶಿಕ್ಷಣದ ಆದ್ಯ ಕರ್ತವ್ಯವಾಗಿದೆ. ಈ ಉದ್ದೇಶದಿಂದ ಶಾಲೆಯಲ್ಲಿ ಶಾಲಾ ನಾಯಕರ ಸ್ಥಾನಗಳಿಗೆ
ಚುನಾವಣೆಯನ್ನು ಏರ್ಪಡಿಸಲಾಗಿತ್ತು ಎಂದರು. ಸಾರ್ವತ್ರಿಕ ಚುನಾವಣೆಗಳಲ್ಲಿ ಇದ್ದಂತೆಯೇ ತರಳಬಾಳು ಶಾಲೆಯಲ್ಲಿಯೂ
ಚುನಾವಣಾ ನೀತಿ ಸಂಹಿತೆ, ಚುನಾವಣಾ ಅಧಿಸೂಚನೆ ಹೊರಡಿಸುವುದರಿಂದ ಪ್ರಾರಂಭವಾದ ಚುನಾವಣಾ ಪ್ರಕ್ರಿಯೆಯು ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವಿಕೆ, ಬಹಿರಂಗ ಪ್ರಚಾರ, ಮತದಾನ, ಮತಏಣಿಕೆ ಹಾಗೂ ಫಲಿತಾಂಶ ಪ್ರಕಟಣೆ ತನಕ ಹಂತ ಹಂತವಾಗಿ ನಡೆಯಿತು.
ಇದು ಪ್ರಜಾಪ್ರಭುತ್ವ ಮಾದರಿ ಚುನಾವಣೆಯ ಭಾಗವಾಗಿತ್ತು. ವಿದ್ಯಾರ್ಥಿಗಳ ಸಮ್ಮುಖದಲ್ಲಿ ಫಲಿತಾಂಶ ಪ್ರಕಟಣೆಯನ್ನು ಹೊರಡಿಸಲಾಯಿತು.
ಈ ಒಂದು ಫಲಿತಾಂಶದಲ್ಲಿ ದೇವರಾಜು ಎಂಬ ವಿದ್ಯಾರ್ಥಿ ಶಾಲಾ ನಾಯಕನಾಗಿ ಆಯ್ಕೆಯಾದನು. ಹರಿಪ್ರಸಾದ್, ನಿಶ್ಚಿತ್, ಸಿಂಧು ಸಂಜನಾ, ಕೀರ್ತನ, ಲಕ್ಷ್ಮೀಶ್, ತನುಶ್ರೀ, ಜೇನುಶ್ರೀ ಹರ್ಷ ವಿಜೇತರಾಗಿದ್ದಾರೆ. ಶಾಲೆಯ ಎಲ್ಲಾ ಶಿಕ್ಷಕರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಕ್ಕಳಿಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.
ಕೋಟ್ :
ಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ
ಪ್ರಜಾಪ್ರಭುತ್ವ ಹಬ್ಬದ ಚುನಾವಣೆಯ ಮೌಲ್ಯವನ್ನು ತಿಳಿಸಿದರೆ ಭವ್ಯ ಭಾರತ ದೇಶದ ಚುನಾವಣೆಯಲ್ಲಿ ಸಕ್ರೀಯತೆಯಲ್ಲಿ ಪಾಲ್ಗೋಳಲು ಅವಕಾಶ ಪಡೆಯಲು ಸಾಧ್ಯವಾಗುತ್ತದೆ. ವಿಜಯ್ಕುಮಾರ್ಮುಖ್ಯ ಶಿಕ್ಷಕರು.