ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನ
ಸುದ್ದಿಮೂಲವಾರ್ತೆ
ಕೊಪ್ಪಳ ಜೂನ್ 27: ಕೊಪ್ಪಳ ಜಿಲ್ಲಾ ಪಂಚಾಯತ್ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ಯೋಜನೆಯಡಿ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ಸಂಸ್ಥೆಯು ಸಾಂಸ್ಥಿಕ ನಿರ್ಮಾಣ ಮತ್ತು ಸಾಮರ್ಥ್ಯ ಬಲವರ್ಧನೆ, ಸಾಮಾಜಿಕ ಅಭಿವೃದ್ಧಿ (ಎಫ್.ಎನ್.ಹೆಚ್.ಡಬ್ಲ್ಯೂ., ಸಾಮಾಜಿಕ ಸೇರ್ಪಡೆ, ಲಿಂಗತ್ವ, ಒಗ್ಗೂಡಿಸುವಿಕೆ), ಹಣಕಾಸು ಸೇರ್ಪಡೆ, ಕೃಷಿ ಜೀವನೋಪಾಯ, ಡಿ.ಡಿ.ಯು.ಜಿ.ಕೆ.ವಾಯ್ ಯೋಜನೆಯಡಿ ಕೌಶಲ್ಯ ತರಬೇತಿ ಕಾರ್ಯಕ್ರಮ, ಈ ಐದು ಕ್ಷೇತ್ರಗಳಲ್ಲಿ ಅನುಭವವಿರುವ ಮತ್ತು ಕ್ರಿಯಾಶೀಲ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮೂಲಕ ತಾಂತ್ರಿಕ ಸೇವೆಗಳನ್ನು ಪಡೆದುಕೊಳ್ಳಲಿದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪದವಿ ತೇರ್ಗಡೆಯಾಗಿರಬೇಕು. ಕನಿಷ್ಠ 5ವರ್ಷ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿರಬೇಕು. ತರಬೇತಿ ಪಡೆದುಕೊಳ್ಳಲು ಅಥವಾ ನೀಡಲು ವಿವಿಧ ಸಂಸ್ಥೆಗಳಿಗೆ ಪ್ರವಾಸ ಮಾಡಲು ಸಿದ್ಧರಿರಬೇಕು. ಕಳೆದ 3ವರ್ಷಗಳಿಂದ ಯೋಜನೆಯ ಸಿಬ್ಬಂದಿ/ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಿರುವ ಅನುಭವಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಈ ಎಲ್ಲಾ ಕ್ಷೇತ್ರಗಳಲ್ಲಿ ಕನಿಷ್ಠ 5ವರ್ಷ ಕಾರ್ಯನಿರ್ವಹಿಸಿ ಅನುಭವವಿರುವ ಹಾಗೂ ಮಾನದಂಡಗಳನ್ವಯ ಅರ್ಹತೆಯುಳ್ಳ ಆಸಕ್ತರು ಖುದ್ದಾಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ದೊರೆಯುವ ನಿಗದಿತ ನಮೂನೆ ಪಡೆದುಕೊಂಡು ಜುಲೈ 05ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.