ಪತ್ರ ಬರೆದ ವಿದ್ಯಾರ್ಥಿನಿಯನ್ನು ಹೊಗಳಿದ ಸಿಎಂ
ಸುದ್ದಿಮೂಲವಾರ್ತೆ
ಕೊಪ್ಪಳ ಜೂ 28: ಸಿಎಂ ಸರ್ ನೀವು ಅನೇಕ ಜನಪರ ಯೋಜನೆಗಳನ್ನು ಹಿಂದೆ ಇದ್ದಾಗ ಜಾರಿಗೊಳಿಸಿದ್ದಿರಿ. ಈಗ ಮತ್ತೆ ಮುಖ್ಯಮಂತ್ರಿಯಾಗಿದ್ದಿರಿ ನಿಮಗೆ ಅಭಿನಂದನೆ, ಈ ಬಾರಿ ಅನೇಕ ಜನಪರ ಯೋಜನೆಗಳನ್ನು ಮುಂದುವರಿಸಿ ಎಂದು ಬಾಲಕಿಯೊಬ್ಬಳು ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಳು. ಈ ಪತ್ರಕ್ಕೆ ಸಿಎಂ ಉತ್ತರಿಸಿದ್ದು ನಿಮ್ಮ ಕಾಳಜಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಸಿಎಂ ಕಡೆಯಿಂದ ಪತ್ರ ಬಂದಿರುವದಕ್ಕೆ ವಿದ್ಯಾರ್ಥಿನಿ ಖುಷ್ ಆಗಿದ್ದಾಳೆ.
ಕೊಪ್ಪಳದ ಪಿಎಲ್ ಡಿಬಿ ಬ್ಯಾಂಕ ಉದ್ಯೋಗಿ ವಿಜಯಕುಮಾರ ಮೆಣಸಗಿಯವರ ಪುತ್ರಿ ಶ್ರೇಯಾಂಕ ವಿ ಮೆಣಸಗಿಗೆ ಸಿಎಂ ಸಿದ್ದರಾಮಯ್ಯ ಬಗ್ಗೆ ಅಭಿಮಾನ. ಕೊಪ್ಪಳದ ಮಾಸ್ತಿ ಪಬ್ಲಿಕ್ ಶಾಲೆಯಲ್ಲಿ ಎಂಟನೆಯ ತರಗತಿ ಓದುತ್ತಿದ್ದಾಳೆ.ಈ ಬಾಲಕಿಗೆ ಮೊದಲಿನಿಂದಲೂ ಸಿಎಂ ಸಿದ್ದರಾಮಯ್ಯ ಬಗ್ಗೆ ಅಭಿಮಾನ. ಈ ಮಧ್ಯೆ ಈಗ ಸಿದ್ದರಾಮಯ್ಯ ಎರಡನೆಯ ಬಾರಿ ಮುಖ್ಯಮಂತ್ರಿಯಾಗಿರುವದರಿಂದ ಅವರಿಗೆ ಪತ್ರ ಬರೆದಿದ್ದು ಅದರಲ್ಲಿ ದೀಮಂತ ನಾಯಕರಾದ ಸಿದ್ದರಾಮಯ್ಯ ನೀವು ರಾಜ್ಯದ 24 ನೆಯ ಮುಖ್ಯಮಂತ್ರಿಯಾಗಿರುವುದು ಖುಷಿಯಾಗಿದೆ. ಈ ಹಿಂದೆ ನೀವು ಜಾರಿಗೊಳಿಸಿದ ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳನ್ನು ಈ ಬಾರಿಯೂ ಮುಂದುವರಿಸಿ ಬಡವರಿಗೆ ಸಹಾಯ ಮಾಡಿ ಎಂದು ಮೇ 29 ರಂದು ಪತ್ರ ಬರೆದಿದ್ದಳು. ಸಾಮಾನ್ಯವಾಗಿ ಇಂಥ ನೂರಾರು ಪತ್ರಗಳು ಸಿಎಂ ಕಚೇರಿಗೆ ಬರುತ್ತವೆ ಆದರೆ ಅವುಗಳಿಗೆ ಉತ್ತರಿಸುವುದು ಕಡಿಮೆ, ಆದರೆ ಶ್ರೇಯಾಂಕ ಬರೆದ ಪತ್ರಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ನಾಡಿನ ನಿರ್ಮಾತೃಗಳು ಮಕ್ಕಳು, 8 ನೆಯ ತರಗತಿ ಓದುತ್ತಿರುವ ನಿನಗೆ ಸಮಾಜಿಕ ಕಳಕಳಿ ಮೆಚ್ಚುವಂತದ್ದೆ ಬಡವರು. ದೀನ ದಲಿತರು ರೈತರ ಬಗೆಗಿನ ಕಾಳಜಿ ಬೆರಗು ಮೂಡಿಸುತ್ತಿದೆ. ಜೀವನ ಶ್ರದ್ದೆ, ಚನ್ನಾಗಿ ಓದಿ ಉತ್ತಮ ಪ್ರಜೆಯಾಗು ಎಂದು ಆರೈಸಿದ್ದಾರೆ.
ಈ ಪತ್ರವು ಬಂದಿರುವದಕ್ಕೆ ಶ್ರೇಯಾಂಕ ಖುಷಿಯಾಗಿದ್ದಾಳೆ. ಸಿಎಂ ಉತ್ತಮ ಕೆಲಸ ಮಾಡಲಿ ಎಂದು ಆಶಿಸಿದ್ದಾಳೆ.
ಮಾಸ್ತಿ ಪಬ್ಲಿಕ್ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಶ್ರೇಯಾಂಕ ಮುಖ್ಯಮಂತ್ರಿಗಳಲ್ಲಿ ಪತ್ರ ಬರೆದು ಜನರ ಬಗ್ಗೆ ಕಾಳಜಿ ವಹಿಸಿದ್ದು ಹೆಮ್ಮೆ ಅನಿಸುತ್ತಿದೆ. ಇದೇ ಮಾದರಿಯಲ್ಲಿ ವಿದ್ಯಾರ್ಥಿಗಳು ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕೆಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಿಗೆ ಅಭಿನಂದಿಸಿ ಎಚ್ಚರಿಸುವ ಕೆಲಸ ಮಾಡುವ ಮನೋಭಾವ ವಿದ್ಯಾರ್ಥಿನಿಯಲ್ಲಿ ಬೆಳೆದಿರುವುದು. ಇಂಥ ವಿದ್ಯಾರ್ಥಿನಿಗೆ ಸಿಎಂ ಸಿದ್ದರಾಮಯ್ಯ ಪ್ರೋತ್ಸಾಹಿಸಿರುವುದು ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ.