ಸುದ್ದಿಮೂಲ ವಾರ್ತೆ
ಜೂ,29:ರಾಮನಗರ ಜಿಲ್ಲೆಯ ಕೆಂಗಲ್ ಯೋಜನಾ ವ್ಯಾಪ್ತಿಯ ಕೈಲಾಂಚ ವಲಯದ ಗುನ್ನೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಒಂದು ಲಕ್ಷ ರೂ. ಮೊತ್ತದ ಮಂಜೂರಾತಿ ಪತ್ರವನ್ನು ಜಿಲ್ಲಾ ನಿರ್ದೇಶಕ ಜಯಕರ್ ಶೆಟ್ಟಿ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಡೇರಿ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ಜನಜಾಗೃತಿ ವೇದಿಕೆ ಸದಸ್ಯರು ಮತ್ತು ಒಕ್ಕೂಟ ಅಧ್ಯಕ್ಷರು, ಯೋಜನಾಧಿಕಾರಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು.