ಸುದ್ದಿಮೂಲವಾರ್ತೆ
ಕೊಪ್ಪಳ ಜೂ 30: ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ, ಇದ್ದಿದ್ದರೆ ಅನ್ನಭಾಗ್ಯ ಯೋಜನೆಯ ಬಗ್ಗೆ ಮಾತನಾಡುತ್ತಿದ್ದಿಲ್ಲ ಎಂದು
ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾತನಾಡಿ ಈಗ ಅನ್ನಭಾಗ್ಯದಲ್ಲಿ ಅಕ್ಕಿಯೊಂದಿಗೆ ಹಣ ನೀಡುವದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಈ ಹಿಂದೆ ಬಿಜೆಪಿಯವರು ಉಚಿತ ಅಡುಗೆ ಅನಿಲ ನೀಡುತ್ತೇವೆ ಎಂದಿದ್ದರು. ಎಲ್ಲಿ ಅಡುಗೆ ಅನಿಲ ನೀಡಿಲ್ಲ ಎಂದು ಹೇಳಿದರು.
ಅಕ್ಕಿಯೊಂದಿಗೆ ಹಣ ನೀಡುವ ಕುರಿತು ಕ್ಯಾಬಿನೆಟ್ ನಲ್ಲಿ ನಿರ್ಧಾರವಾಗಿದೆ. ಇನ್ನೂ ಉತ್ತರ ಕರ್ನಾಟಕದಲ್ಲಿ
ಜೋಳ ಕೊಡುವ ಬಗ್ಗೆ ನಿರ್ಧರಿಸಲಿದ್ದಾರೆ ಬಡವರ ಪರವಾದ ಯೋಜನೆಗಳು ಜನರಿಗೆ ಅನುಕೂಲವಾಗಿವೆ. ಶಕ್ತಿ ಯೋಜನೆಯಲ್ಲಿ ಬಡವರ ಬೇರೆ ಬೇರೆ ಕಡೆ ಹೋಗುತ್ತಿದ್ದಾರೆ. ಇದೇ ವೇಳೆ ನಮ್ಮ ಜಿಲ್ಲೆಯ ಹುಲಿಗೆಮ್ಮ ಹಾಗು ಕನಕಗಿರಿಯ ಕನಕಾಚಲಪತಿಯ ದೇವಸ್ಥಾನ ಹೆಚ್ಚಾಗಿದೆ. ಇದು ಒಳ್ಳೆಯದು ಎಂದು ಹೇಳಿದರು.
ಬರುವ ಬಜೆಟ್ ನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚು ಅನುದಾನ ನಿರೀಕ್ಷೆ ಇದೆ. ಸಾಕಷ್ಟು ಯೋಜನೆಗಳ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಆಗಬೇಕಾದ ಯೋಜನೆಗಳು ಯಲಬುರ್ಗಾದ ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿಯೊಂದಿಗೆ ಚರ್ಚೆ ಸಾಕಷ್ಟು ಯೋಜನೆಗಳನ್ನು ತರುತ್ತೇವೆ ಎಂದರು.
ನೆನೆಗುದಿಗೆ ಬಿದ್ದಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಗೂ ಆದ್ಯತೆ ನೀಡಲಾಗುವುದು ಎಂದು
ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿದರು.