ಸುದ್ದಿಮೂಲವಾರ್ತೆ
ಕೊಪ್ಪಳ ಜೂ 30: ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಕುಡಿವ ನೀರಿನ ಸಮಸ್ಯೆ ಬರಬಾರದು. ಕುಡಿವ ನೀರಿನ ಅವಶ್ಯಕತೆ ಇದ್ದಲ್ಲಿ ಬೇಗ ಕ್ರಮ ಕೈಗೊಳ್ಳಬೇಕೆಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಕೊಪ್ಪಳ ತಾಲೂಕಾ ಸಭಾಂಗಣದಲ್ಲಿ ಈ ಅವಧಿಯ ಪ್ರಥಮ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ತಾಲೂಕಿನಲ್ಲಿ ಒಟ್ಟು 175 ಶುದ್ದ ಕುಡಿವ ನೀರಿನ ಘಟಕಗಳಿವೆ. ಅವುಗಳಲ್ಲಿ 141 ಘಟಕಗಳಲ್ಲಿ ನೀರು ಪಡೆಯುತ್ತಿದ್ದಾರೆ. 35 ಘಟಕಗಳು ನಾನಾ ಕಾರಣಕ್ಕಾಗಿ ಬಂದ್ ಆಗಿವೆ. ಸಣ್ಣ ಪುಟ್ಟ ರಿಪೇರಿ ಇದ್ದರೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸರಿಪಡಿಸಿಕೊಳ್ಳಿ. ದೊಡ್ಡಪ್ರಮಾಣದಲ್ಲಿ ರಿಪೇರಿ ಇದ್ದರೆ ಪ್ರಸ್ತಾವನೆ ಸಲ್ಲಿಸಿ. ಇದೇ ಜೆಜೆಎಂ ಕಾಮಗಾರಿಯಿಂದ ಬಿಜಕಲ್ ನಲ್ಲಿ ಆಗಿರುವ ವಾಂತಿ ಬೇಧಿ ಪ್ರಕರಣಗಳು ಇಲ್ಲಿ ಆಗ ಬಾರದ ಎಲ್ಲಾ ಕಡೆ ನಿಗಾವಹಿಸಿ ಕ್ರಮ ಕೈಗೊಳ್ಳಿ. ಜೆಜೆಎಂ ಈಗ 19 ಗ್ರಾಮಗಳಲ್ಲಿ ಮಾತ್ರ ನೀರು ನೀಡಲಾಗುತ್ತಿದೆ. ಉಳಿದ ಕಡೆಯೂ ನೀರು ನೀಡುವಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು.
ಮಳೆಗಾಲದಲ್ಲಿ ಬರುವ ಡೆಂಗ್ಯೂ , ಚಿಕನ್ ಗುನ್ಯ ಕಾಯಿಲೆ ಬಾರದಂತೆ ಕ್ರಮ ವಹಿಸಬೇಕು.ಕೊಪ್ಪಳ ತಾಲೂಕಿನಲ್ಲಿ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳು. 2 ಸಮುದಾಯ ಆರೋಗ್ಯ ಕೇಂದ್ರಗಳಿವೆ. ಹಂತ ಹಂತವಾಗಿ ದೊಡ್ಡ ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದೆ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಕೊಪ್ಪಳ ತಾಲೂಕಿನಲ್ಲಿ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಪಾಸಾಗುವಂತೆ ಬಿಇಒ ಶಾಲೆಗಳಲ್ಲಿ ಕ್ರಮ ಕೈಗೊಳ್ಳಬೇಕು. ಕೆಲವು ಶಿಕ್ಷಕರು ಶಾಲೆಗೆ ಹೋಗುತ್ತಿಲ್ಲ. ಈ ಬಗ್ಗೆ ನೀವು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ತಾಲೂಕಿನ ಎಲ್ಲಾ ಶಾಲೆಗಳಲ್ಲಿಯೂ ಅಡುಗೆ ಹಾಗು ಭೋಜನಾಲಯ ನಿರ್ಮಿಸಲು ಒಟ್ಟು 18 ಲಕ್ಷ ರೂಪಾಯಿ ಅವಶ್ಯವಿದೆ ಎಂಬ ಬಿಇಒ ಹಾಗು ತಾಲೂಕಾ ಪಂಚಾಯತ್ ಅಧಿಕಾರಿಗಳ ಮಾಹಿತಿಗೆ ಎಲ್ಲಾ ಕಡೆ ಭೋಜನಾಲಯ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
ಈ ವರ್ಷ ಪ್ರತಿ ಗ್ರಾಮ ಪಂಚಾಯತ್ ಯಲ್ಲಿ 1000 ಮೀಟರ್ ರಸ್ತೆ ಹಾಗು ಚರಂಡಿಯನ್ನು ನರೇಗಾದಲ್ಲಿ ತೆಗೆದುಕೊಂಡು ಗ್ರಾಮಗಳ ರಸ್ತೆ ಹಾಗು ಚರಂಡಿಗಳ ಅಭಿವೃದ್ದಿ ಪಡಿಸಬೇಕು. ಅಲ್ಲದೆ ನರೇಗಾ ಬಳಕೆಯಲ್ಲಿ ಕನಕಪುರ ಮೊದಲು ಸ್ಥಾನದಲ್ಲಿದ್ದು ಅಲ್ಲಿಗೆ ತಾಲೂಕಿನ ಪಿಡಿಒಗಳನ್ನು ಅಧ್ಯಯನಕ್ಕೆ ಕಳುಹಿಸಿ ಅಲ್ಲಿ ತೆಗೆದುಕೊಂಡಂತೆ ಇಲ್ಲಿಯೂ ನರೇಗಾ ಅನುದಾನ ಹೆಚ್ಚು ಬಳಸಿಕೊಂಡು ಜನರಿಗೆ ಉದ್ಯೋಗ ಹಾಗು ಗ್ರಾಮಗಳ ಅಭಿವೃದ್ಧಿ ಗೆ ಒತ್ತು ನೀಡಬೇಕೆಂದು ಸೂಚಿಸಿದರು.
ತಾಲೂಕಾ ಪಂಚಾಯತ್ ಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಗಂಭೀರ ವಿಷಯಗಳ ಚರ್ಚೆ ನಡೆಯುತ್ತಿದ್ದರೆ ಕೆಲವು ಅಧಿಕಾರಿಗಳು ಇದು ತಮಗೆ ಸಂಬಂಧವಿಲ್ಲ ಎಂಬಂತೆ ಮೊಬೈಲ್ ಚಾಟಿಂಗ್ ನಲ್ಲಿ ಬ್ಯುಸಿಯಾಗಿರುವುದು ಕಂಡು ಬಂತು.
ಸಭೆಯಲ್ಲಿ ತಹಸೀಲ್ದಾರ ಅಮರೇಶ ಬಿರಾದಾರ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತೂರಾದಿ ಇದ್ದರು.