ಸುದ್ದಿಮೂಲ ವಾರ್ತೆ
ತಿಪಟೂರು, ಜೂ 30 : ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಆಚಾರ-ವಿಚಾರ, ಶಿಸ್ತು,ಪ್ರಾಮಾಣಿಕತೆ ಇಲ್ಲದಂತಾಗಿದೆ. ನೈತಿಕತೆ ಮತ್ತು ಮಾನವೀಯ ಮೌಲ್ಯಗಳು ಮಾಯವಾಗುತ್ತಿವೆ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಮುದ್ರಣಗೊಂಡಿರುವ ಪ್ರಾರ್ಥನಾ ಪುಸ್ತಕ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಸಾಪ ತಾ. ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ, ಆಧುನಿಕ ಕಾಲಕ್ಕೆ ಮಾರ್ಪಾಡು ಮಾಡಿಕೊಂಡು ಜೀವನೋಪಯೋಗಿ ಶ್ರೀಮಠವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಮಠದ ಆಡಳಿತಾಧಿಕಾರಿ ಯು.ಎಸ್. ಲೋಕೇಶ್ ಮಾತನಾಡಿ, ಈ ಪ್ರಾರ್ಥನಾ ಪುಸ್ತಕದಲ್ಲಿರುವ ಎಲ್ಲಾ ನುಡಿಮುತ್ತುಗಳನ್ನು ಮನನ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಕೆ.ಆರ್. ಶಂಕರಪ್ಪ, ನಿವೃತ ಮುಖ್ಯ ಶಿಕ್ಷಕ
ಡಿ.ಹೆಚ್. ಗಂಗಣ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಹಾಗೂ ಸಾಹಿತಿ ಲೇಖಕರಾದ ಎಸ್.ಜಿ. ಸಿದ್ಧರಾಮಯ್ಯ,
ಎಂಜಿನಿಯರ್ ಕುಮಾರಸ್ವಾಮಿ, ಈಚನೂರು ರಾಜಶೇಖರ್, ಹಂ.ಸಿ.ಕುಮಾರಸ್ವಾಮಿ, ಮುಖ್ಯೋಪಾಧ್ಯಾಯರಾದ ಕುಮಾರಸ್ವಾಮಿ ಸೇರಿದಂತೆ ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗ,
ಶ್ರೀಮಠದ ಭಕ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.