ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ 30 : ಸಮಯಕ್ಕೆ ಸರಿಯಾಗಿ ಸಾರಿಗೆ ನೌಕರರಿಗೆ ಸಂಬಳ ನೀಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ನಗರದ ಬಿ ಎಂ ಟಿ ಸಿ ಕೇಂದ್ರ ಕಚೇರಿಯ ಮುಂಬಾಗದಲ್ಲಿ ಹೊಸ ಬೊಲೆರೋ ಮತ್ತು ತರಬೇತಿ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಬಳಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಒಂದು ತಿಂಗಳು ಮಾತ್ರ ಸಂಸ್ಥೆ ಯಿಂದ ಎಲ್ಲಾ ನೌಕರರಿಗೂ ಸಂಬಳ ಕೊಡುವ ವ್ಯವಸ್ಥೆ ಮಾಡಲಾಗಿದೆ ಮುಂದಿನ ತಿಂಗಳಿನಿಂದ ಸರಕಾರ ಸರಿಯಾದ ಸಮಯಕ್ಕೆ ನೌಕರರಿಗೆ ತಿಂಗಳ ಸಂಬಳ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದರು .
ಶಕ್ತಿ ಯೋಜನೆಯಡಿಯಲ್ಲಿ ಉಚಿತ ಪ್ರಯಾಣ ನೀಡುತ್ತಿರುವ ಸಾರಿಗೆ ವ್ಯವಸ್ಥೆಯಲ್ಲಿ ಯಾವ ಭಾಗದಲ್ಲಿ ಹೆಚ್ಚಿನ ಒತ್ತಡವಿದೆಯೋ ಅಲ್ಲಿ ಗಮನ ಹರಿಸಿ ಸರಿಯಾದ ವ್ಯವಸ್ಥೆ ಮಾಡಿವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಪ್ರಮುಖವಾಗಿ ಧರ್ಮಸ್ಥಳ , ಪುಣ್ಯ ಕ್ಷೇತ್ರಗಳು ಹಾಗು ಶಾಲಾ ಮಕ್ಕಳ ವಾಹನ ಸಂಚರಿಸುವ ಕಡೆ ಹೆಚ್ಚು ಗಮನ ಹರಿಸುವಂತೆ ಸೂಚಿಸಿದ್ದಾರೆ.
ಕರ್ನಾಟಕದ 300 ಹಳ್ಳಿಗಳನ್ನು ಬಿಟ್ಟು ಉಳಿದೆಲ್ಲ ಗ್ರಾಮಗಳಿಗೂ ಸಾರಿಗೆ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಅಲ್ಲಿಗೂ ವ್ಯವಸ್ಥೆ ಮಾಡಲಾಗುವುದು. 6 ತಿಂಗಳ ಅವಕಾಶದಲ್ಲಿ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿ ಮತ್ತು ವಿಡಿಯೋ ಗಳನ್ನೂ ಪತ್ತೆ ಹಚ್ಚಿ ಕಾನೂನು ಕ್ರಮದ ಜೊತೆ ಸರಿಯಾದ ಮಾಹಿತಿ ಸಾರ್ವಜನಿಕರಿಗೆ ತಿಳಿಸುವಂತೆ ಆದೇಶಿಸಲಾಗಿದೆ. ಖಾಸಗೀ ಪ್ರವರ್ತಕರೊಂದಿಗೆ ಪೈಪೋಟಿ ನೀಡುವ ಸಲುವಾಗಿ 44 ಹವಾನಿಯಂತ್ರಣ ರಹಿತ ಹಾಗು 4 ಹವಾ ನಿಯಂತ್ರಿತ ಸ್ಲೀಪರ್ ವಾಹನಗಳ ಖರೀದಿಸಲಾಗಿದೆ . ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 450 ವಿದ್ಯುತ್ ಚಾಲಿತ ವಾಹನಗಳನ್ನು ಜಿ.ಸಿ.ಸಿ. ಆಧಾರದ ಮೇಲೆ ಪಡೆಯಲು ಟೆಂಡರ್ ಆಹ್ವಾನಿಸಲು ಅನುಮತಿ. 20 ಹವಾನಿಯಂತ್ರಣ ರಹಿತ ಮತ್ತು 4 ಹವಾ ನಿಯಂತ್ರಿತ ಸ್ಲೀಪರ್ ವಾಹನಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ನೌಕರರು ಕಾನ್ಸರ್ ಕಾಯಿಲಿಗೆ ತುತ್ತಾಗಿದ್ದು, ವೈದ್ಯರ ಸಲಹೆ ಮೇರೆಗೆ ಕಿಮೋ ಅಥವಾ ರೇಡಿಯೋ ಥೆರೆಪಿಗೆ ಒಳಪಟ್ಟಲ್ಲಿ ಚಿಕಿತ್ಸೆಯ ಅವಧಿಯಲ್ಲಿ ಗರಿಷ್ಠ ಆರು ತಿಂಗಳ ವಿಶೇಷ ಸಾಧರ್ಭಿಕ ರಜೆ ಮಂಜೂರು ಮಾಡಲಾಗುವುದು. ಈಗಾಗಲೇ ಜಾರಿಯಲ್ಲಿರುವ ನೇಮಕಾತಿ ಪ್ರಕ್ರಿಯೆಯ ಜೊತೆ ಹೊಸದಾಗಿ 1433 ಚಾಲನಾ ಸಿಬ್ಬಂದಿ ಮತ್ತು 2738 ತಾಂತ್ರಿಕ ಸಿಬ್ಬಂದಿಗಳನ್ನು ನೇರ ನೇಮಕಾತಿ ಮೂಲಕ ತುಂಬಲಯು ಸರಕಾರದಿಂದ ಅನುಮತಿ ಪಡೆಯಲು ತೀರ್ಮಾಅನಿಸಲಾಗಿದೆ.
ನಿಗಮದ ವಾಣಿಜ್ಯ ಆದಾಯವನ್ನು ಹೆಚ್ಚಿಸಲು ಪೆಟ್ರೋಲ್ ಬಂಕ್ ತೆರೆಯಲು ಟೆಂಡರ್ ನಲ್ಲಿ ಆಯ್ಕೆಯಾಗಿರುವ ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಗಳಿಗೆ 10 ಔಟ್ಲೆಟ್ ಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಣಸಿಯಲ್ಲಿ ಬಸ್ ಘಟಕ, ನಿಲ್ದಾಣ ನಿರ್ಮಿಸುವ ಸಲುವಾಗಿ ಕೃಷ್ಣ ಜಲ ನಿಗಮ ನಿಯಮಿತ ಅವರ 8 ಎಕೆರೆ 21 ಗುಂಟೆ ನಿವೇಶನವನ್ನು ಪಡೆಯಲು ತೀರ್ಮಾನಿಸಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗೆ ಪ್ರತಿಷ್ಠಿತ ವಾಹನಗಳ ಅವಶ್ಯಕತೆ ಇರುವುದರಿಂದ 6 ಹವಾನಿಯಂತ್ರಣ ರಹಿತ ವಾಹನಗಳ ಸೇರ್ಪಡೆ , 550 ಡಿಸೇಲ್ ವಾಹನ, 150 ವಿದ್ಯುತ್ ಚಾಲಿತ ವಾಹನ ಖರೀದಿ ಹಾಗು ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ , 1773 ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಮಾಡಲು ಸರ್ಕಾರದ ಅನುಮತಿ ಪಡೆಯುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಭಾಅ ಸೇ ಸತ್ಯವತಿ, ವ್ಯವಸ್ಥಾಪಕ ನಿರ್ದೇಶಕರು ಬಿ ಎಂ ಟಿ ಸಿ ಸೂರ್ಯಸೇನ್, ಭಾಅ ಸೇ ನಿರ್ದೇಶಕರು ( ಮಾಹಿತಿ ತಂತ್ರಜ್ಞಾನ ) ಮುಂತಾದವರು ಉಪಸ್ಥಿತರಿದ್ದರು.