ಸುದ್ದಿಮೂಲವಾರ್ತೆ
ಕೊಪ್ಪಳ ಜು 02: ಇಂದಿನ ಅಧುನಿಕ ಕಾಲದಲ್ಲಿ ಸ್ಪಂದನೆಯ ಎಂಬ ಶಬ್ದವನ್ನು ಹುಡಕಬೇಕಾಗಿದೆ.
ಹುಡುಕುವ ಕೆಲಸವನ್ನು ಬರಹಗಾರರು ಮಾಡಬೇಕು ಎಂದು ಉಪನ್ಯಾಸಕರಾದ ಶಿವಾನಂದ ಮೇಟಿ ಹೇಳಿದರು.
ಅವರು ಕೊಪ್ಪಳದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿ ಎಸ್ ಗೋನಾಳರ ಆಯ್ದ ಲೇಖನಗಳ ಅವಲೋಕನ ಸಂಕಲನ ಕೃತಿ ಬಿಡುಗಡೆ, ಸನ್ಮಾನ ಹಾಗು ಕವಿಗೋಷ್ಠಿಯಲ್ಲಿ ಮಾತನಾಡಿದರು.
ಪತ್ರಿಕೆಗಳು ಸಮಾಜದಲ್ಲಿಯ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ಸ್ವತಂತ್ರ್ಯ ಅದರಲ್ಲಿ ಹೈದ್ರಾಬಾದ್ ವಿಮೋಚನಾ ಹೋರಾಟವನ್ನು ಪಠ್ಯದಲ್ಲಿ ಸೇರಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪುಸ್ತಕ ಬಿಡುಗಡೆ ಮಾಡಿದ ಜಿಪಂ ಲೆಕ್ಕಾಧಿಕಾರಿ ಅಮೀನ ಅತ್ತಾರರವರು ಸಾಹಿತ್ಯ ಎನ್ನುವುದು ಖುಷಿ ಕೊಡುತ್ತೆ. ಸಾಹಿತ್ಯ ಮನಸ್ಸನ್ನು ಕೂಡಿಸುತ್ತದೆ. ಕವಿತೆ ಕಟ್ಟಬೇಕು. ಕಟ್ಟು ಕವಿತೆಗಳು ಬೇಡ ಎಂದರು.
ಕಾರ್ಯಕ್ರಮವನ್ನು ಎಸ್ ಎಂ ಕಂಬಾಳಿಮಠ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಶರಣಬಸಪ್ಪ ಬಿಳಿಯೆಲೆ ವಹಿಸಿದ್ದರು.
ಫಕೀರಪ್ಪ ಎಮ್ಮಿ ಸ್ವಾಗತಿಸಿದರು. ಮಂಜುನಾಥ ಚಿತ್ರಗಾರ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಹಾಂತೇಶ ಮಲ್ಲನಗೌಡರ. ಎಂ ಸಾದೀಕ ಅಲಿ. ಶರಣಪ್ಪ ಬಾಚಲಾಪುರ, ಬಾಲಕೃಷ್ಣ ಚಿತ್ರಗಾರ, ಸಿದ್ದಲಿಂಗಪ್ಪ ಕೋಟ್ನೆಕಲ್ಇದ್ದರು.
ಈ ಸಂದರ್ಭದಲ್ಲಿ ಶರತ್ಚಂದ್ರ, ಶಿವನಗೌಡ ಪೊಲೀಸ್ ಪಾಟೀಲ ಹಾಗು ಜಿ ಎಸ್ ಗೋನಾಳರನ್ನು ಸನ್ಮಾನಿಸಿದರು.