ಸುದ್ದಿಮೂಲ ವಾರ್ತೆ
ಮೈಸೂರು, ಜು.2: ಸಲ್ಲದ ಕಾರಣಕ್ಕೆ ಪತ್ನಿಯ ಮೇಲೆ ಸಿಟ್ಟು ತೀರಿಸಿಕೊಳ್ಳಲು ಪತಿರಾಯನೊಬ್ಬ ತನ್ನ ಪತ್ನಿಯ ಖಾಸಗಿ ಹಾಗೂ ಅರೆನಗ್ನ ಫೋಟೋಗಳನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟ ಪ್ರಕರಣ ಇಲ್ಲಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶಾಂತಿನಗರ ನಿವಾಸಿ ಉಮ್ಮೆಹನಿ ಎಂಬುವರು ಪತಿ ಅಬ್ದುಲ್ ಸಲೀಂ ಎಂಬುವರ ವಿರುದ್ದ ದೂರು ದಾಖಲಿಸಿದ್ದಾರೆ.10 ತಿಂಗಳ ಹಿಂದೆ ಅಬ್ದುಲ್ ಸಲ ಎಂಬುವರನ್ನ ವಿವಾಹವಾಗಿದ್ದ ಉಮ್ಮೆಹನಿ ಕಾರಣಾಂತರದಿಂದ ಬೇರೆಯಾಗಿದ್ದಾರೆ. ದಂಪತಿ ಅನ್ಯೋನ್ಯವಾಗಿದ್ದ ವೇಳೆ ಸಲೀಂ ಖಾಸಗಿ ಫೋಟೋಗಳನ್ನ ತೆಗೆದಿದ್ದಾರೆ.ಇಬ್ಬರೂ ಬೇರೆಯಾದ ನಂತರ ಪತ್ನಿಯ ಖಾಸಗಿ ಹಾಗೂ ಅರೆನಗ್ನ ಫೋಟೋಗಳನ್ನ ಟ್ವಿಟರ್ ನಲ್ಲಿ ಒನ್ ಟೈಂ ವ್ಯೂ ನಲ್ಲಿ ಸೆಂಡ್ ಮಾಡಿ ಡಿಲೀಟ್ ಮಾಡಿದ್ದಾರೆ.
ಅಲ್ಲದೆ ಸ್ನೇಹಿತರ ವಾಟ್ಸಾಪ್ ಗಳಿಗೂ ಸೆಂಡ್ ಮಾಡಿದ್ದಾರೆ. ಇದು ತಮ್ಮ ಘನತೆಗೆ ಧಕ್ಕೆ ತಂದ ಪತಿ ವಿರುದ್ದ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ಉಮ್ಮೆಹನಿ ದೂರು ದಾಖಲಿಸಿದ್ದಾರೆ.