ಆಷಾಢ ಹುಣ್ಣಿಮೆ. ಹುಲಿಗಿಗೆ ಭಕ್ತ ಸಾಗರ
ಸುದ್ದಿಮೂಲವಾರ್ತೆ
ಕೊಪ್ಪಳ ಜು 03:ಇಂದು
ಆಷಾಢ ಹುಣ್ಣಿಮೆ ಹಿನ್ನೆಲೆಯಲ್ಲಿ ಶಕ್ತಿ ದೇವಿಯಾದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತ ಸಾಗರ ಹರಿದು ಬಂದಿದೆ.
ಹುಲಿಗಿಯ ಶಕ್ತಿ ದೇವತೆ ಶ್ರೀಹುಲಿಗೆಮ್ಮ ದೇವಿಯ ದರ್ಶನಕ್ಕೆ ಲಕ್ಷಾಂತರ ಜನ ಬಂದಿದ್ದರು. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣದಿಂದ ಭಕ್ತರು ಆಗಮಿಸಿದ್ದರು.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯ ನಂತರ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಕೊಪ್ಪಳ, ಗಂಗಾವತಿ, ಹೊಸಪೇಟೆ ಮಾರ್ಗವಾಗಿ ಹುಲಿಗಿಗೆ ಬರುವ ಭಕ್ತರಿಗಾಗಿ ಗಂಗಾವತಿ ಹಾಗು ಕೊಪ್ಪಳದಿಂದ 100 ಟ್ರಿಪ್ ಬಸ್ ವ್ಯವಸ್ಥೆ ಮಾಡಲಾಗಿತ್ತು.ಬೆಳಗ್ಗೆನೆ ಸಾಲು ಗಟ್ಟಿ ನಿಂತು ದೇವಿ ದರ್ಶನ
ಕಾಯಿ ಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಪ್ರತಿ ಹುಣ್ಣಿಮೆ ಹೊಲಿಸಿದರೆ ಈ ಹುಣ್ಣಿಮೆಯಂದು ಜನರ ಸಂಖ್ಯೆ ಕಡಿಮೆಯಾಗಿದೆ. ಆದರೆ ಬಂದಿರುವ ಭಕ್ತರಲ್ಲಿ ಮಹಿಳೆಯರೇ ಹೆಚ್ಚು
ಕಳೆದ ಎರಡು ತಿಂಗಳಲ್ಲಿ ದೇವಸ್ಥಾನಕ್ಕೆ ಆದಾಯ ಹೆಚ್ಚಳ
ಸಾಮನ್ಯವಾಗಿ ಜಾತ್ರೆ ನಂತರ ಜನ ಕಡಿಮೆಯಾಗುತ್ತಿದ್ದರು
ಆದರೆ ಈ ಬಾರಿ ನಿತ್ಯ ಜನರಿದ್ದಾರೆ ಎಂದು
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತಗುಂಡಿ ಹೇಳಿದ್ದಾರೆ.
ದೂರದಿಂದ ಬಸ್ ನಲ್ಲಿ ಬಂದಿರುವ ಮಹಿಳೆಯರು
ಬಸ್ ನಲ್ಲಿ ಪ್ರಯಾಸ ಪಟ್ಟು ಬರುವಂತಾಗಿದೆ.ಉಚಿತ ಬಸ್ ಪ್ರಯಾಣ ಮಾಡಿದ್ದು ಸರಿ ಅಲ್ಲ
ನಾವು ಪ್ರತಿ ಹುಣ್ಣಿಮೆಯಂದು ಬರುತ್ತೇವೆ. ಬಸ್ ಪ್ರಯಾಣ ಹಾಗು ದೇವಸ್ಥಾನದಲ್ಲಿ ಜನಜಂಗುಳಿಯಿಂದ ಬೇಸರ ವ್ಯಕ್ತಪಡಿಸಿದರು.