ಸುದ್ದಿಮೂಲ ವಾರ್ತೆ
ಕುಷ್ಟಗಿ, ಜು. 04:ಹೈದ್ರಾಬಾದ್ ಪ್ರಾಂತ್ಯದ ವಿಮೋಚನಾ ಹೋರಾಟದಲ್ಲಿ ಕುಷ್ಟಗಿ ತಾಲೂಕು ಸ್ವಾತಂತ್ರ್ಯ ಹೋರಾಟಗಾರರ ಕುರಿತು ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಅನ್ನದಾನೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ವಿಜೇತರಾಗಿದ್ದಾರೆ.
ಕುಷ್ಟಗಿ ಪಟ್ಟಣದಲ್ಲಿ ಮಂಗಳವಾರ ಪರಮ ತಪಸ್ವಿ ಭೀಮಜ್ಜಿ ಮುರಡಿ ತಪೋಭೂಮಿ ಸೇವಾ ಟ್ರಸ್ಟ್ ಹಾಗೂ ಸ್ಥಳೀಯ ಪ್ರಗತಿ ಪರ, ಕನ್ನಡ ಪರ, ಸಂಘಟನೆಗಳ ಸಹಯೋಗದೊಂದಿಗೆ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಅನ್ನದಾನೇಶ್ವರ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಯಲ್ಲಮ್ಮ ಮಾದರ ಪ್ರಥಮ ಸ್ಥಾನ ಪಡೆದರೆ, ಅನ್ನಪೂರ್ಣ ಹೂಗಾರ ದ್ವಿತೀಯ ಸ್ಥಾನ, ವಿಜಯಲಕ್ಷ್ಮಿ ಮರಳಿ ತೃತೀಯ ಸ್ಥಾನ ಹಾಗೂ ಸಂಗೀತಾ ಅಂಗಡಿ, ವಿಜಯಲಕ್ಷ್ಮೀ ಅಂಗಡಿ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದರು. ತೀರ್ಪುಗಾರರಾಗಿ ಅಮೃತರಾಜ ಜ್ಞಾನಮೋಟೆ
ಎ.ವೈ.ಲೋಕರೆ, ಘೋರ್ಪಡೆ ಅವರು ನಿರ್ವಹಿಸಿದರು.
ವಿಜೇತ ವಿದ್ಯಾರ್ಥಿನಿಯರಿಗೆ ಜು.6ರಂದು ಬಸವ ಭವನದಲ್ಲಿ ನಡೆಯಲಿರುವ ಮಹಾತಪಸ್ವಿ ಭೀಮಜ್ಜ ಮುರಡಿ ಇವರ 67ನೇ ಪುಣ್ಯತಿಥಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ದಿ.ಪುಂಡಲೀಕಪ್ಪ ಜ್ಞಾನಮೋಟೆ ಅವರ 10ನೇ ಪುಣ್ಯಸ್ಮರಣೆ ಹಾಗೂ ಹೈ. ಪ್ರಾ. ಸ್ವಾತಂತ್ರ್ಯಯೋಧರಿಗೆ ಗೌರವ ನಮನ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಗುತ್ತದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.