ಸುದ್ದಿಮೂಲ ವಾರ್ತೆ
ಜು.5: ಹಡಪದ ಅಪ್ಪಣ್ಣ ಅವರು 12 ನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಒಬ್ಬರಾಗಿದ್ದರು ಎಂದು ತಿಪಟೂರು ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ಪವನ್ ಕುಮಾರ್ ತಿಳಿಸಿದರು, ಅವರು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲ್ಲೂಕಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ವಿಜಯಪುರ ಜಿಲ್ಲೆಯ ತಂಗಡಗಿಯಲ್ಲಿ ನೆಲೆಸಿದ್ದ ಅಪ್ಪಣ್ಣ ರವರು 250 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂಬುದು ಐತಿಹ್ಯವಿದೆ, ಸರ್ಕಾರದ ಸವಲತ್ತು ಗಳನ್ನು ಆರ್ಥಿಕವಾಗಿ ಹಿಂದುಳಿದ ಸಮಾಜಗಳು ಪಡೆದು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ತಾಲ್ಲೂಕು ಸವಿತಾ ಸಮಾಜದ ಮಾಜಿ ಅಧ್ಯಕ್ಷರಾದ ಟಿ.ಸಿ.ಗೋವಿಂದರಾಜು ರವರು ಹಡಪದ ಅಪ್ಪಣ್ಣ ಅವರ ಬಗ್ಗೆ ಉಪನ್ಯಾಸ ನೀಡುತ್ತ, ಯಶಸ್ವಿನಿ ವಿಮಾ ವ್ಯಾಪ್ತಿಗೆ ಕ್ಷೌರಿಕರನ್ನು ಸೇರಿಸಬೇಕು,ಹಾಗೂ ಕ್ಷೌರಿಕ ವೃತ್ತಿಯನ್ನು ಮಾಡುವ 60 ವರ್ಷ ಪೂರೈಸಿದ ವ್ಯಕ್ತಿ ಗಳಿಗೆ ಮಾಸಿಕ ಐದು ಸಾವಿರ ಮಾಶಸನ ಸರ್ಕಾರ ನೀಡಬೇಕೆಂದು ಓತ್ತಾಯಿಸಿದರು, ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿಯಾದ ವಿಜಯಕುಮಾರ್ ಮಾತನಾಡುತ್ತ, ನಮ್ಮ ಸಮಾಜದ ಮುಂಚೂಣಿಯ ನಾಯಕರುಗಳಿಗೆ ಸರ್ಕಾರದ ಎಂ.ಎಲ್.ಸಿ. ಅಥವಾ,ಸ್ಥಳೀಯ ಸಂಸ್ಥೆಗಳಲ್ಲಿ ,ನಿಗಮ ಮಂಡಳಿಯಲ್ಲಿ ನಾಮಿನಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ರಾಜಕೀಯ ಸ್ಥಾನಮಾನ ದೊರಕುವಂತೆ ಮಾಡಿ ಸಾಮಾಜಿಕ ನ್ಯಾಯ ಸಿಗುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು, ಇದೇ ಸಂದರ್ಭ ದಲ್ಲಿ ದಲಿತ ಮುಖಂಡ ರಾದ ಕುಂದೂರು ತಿಮ್ಮಯ್ಯ ರವರು ಮಾತನಾಡುತ್ತ ,ಹಡಪದ ಅಪ್ಪಣ್ಣ ಅವರು ರಚಿಸಿರುವ ವಚನಗಳ ಬಗ್ಗೆ ಸರ್ಕಾರ ಅಧ್ಯಯನ ನಡೆಸಿ ಗ್ರಂಥದ ಮೂಲಕ ಹೊರತಂದು ಮುಂದಿನ ಪೀಳಿಗೆಗೆ ದಾರಿ ದೀಪವಾಗಬೇಕಾಗಿದೆ ಎಂದರು.
ಗ್ರೇಡ್ 2 ತಹಶೀಲ್ದಾರ್ ಜಗನ್ನಾಥ್, ರವಿಕುಮಾರ್,ತಾಲ್ಲೂಕು ಕಛೇರಿಯ ಸಿಬ್ಬಂದಿಗಳಾದ ಅಶೋಕ್,ಪುನೀತ್,ದಲಿತ ಮುಖಂಡ ಕೃಷ್ಣಮೂರ್ತಿ,ಸವಿತಾ ಸಮಾಜದ ಯುವ ಪಡೆಯ ಅಧ್ಯಕ್ಷ ಟಿ.ಜೆ ವರದರಾಜು, ಮುಖಂಡರಾದ, ಮುತ್ತುರಾಜು,ಎಸ್.ಕುಮಾರ್, ಟಿ.ಎಂ.ವರದರಾಜು, ಎಲ್.ಕೃಷ್ಣಪ್ಪ, ಟಿ.ಸಿ.ಮಂಜುನಾಥ್, ಗೋಪಿ ,ನವೀನ್, ಆನಂದ್,ಟಿ.ಜಿ.ರಾಮಚಂದ್ರ, ಮೂರ್ತಿ, ರಮೇಶ್,ಕಿರಣ್ ಕುಮಾರ್,ಶಿವು,ಟಿ.ಸಿ.ಚಂದ್ರಶೇಖರ್,ರಾಮು ಟಿ.ಎನ್.ಕುಮಾರಸ್ವಾಮಿ, ಪರಮೇಶ್, ಪುರುಷೋತ್ತಮ, ಮತ್ತಿತರರು ಇದ್ದರು