ಸುದ್ದಿಮೂಲ ವಾರ್ತೆ
ರಾಯಚೂರು,ಜು.12:ರಾಹುಲ್ ಗಾಂಧಿಯವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ್ದನ್ನು ಖಂಡಿಸಿ ರಾಯಚೂರಿನಲ್ಲಿ ಕಾಂಗ್ರೆಸ್ ನಾಯಕರು ಮೌನ ಪ್ರತಿಭಟನಾ ಧರಣಿ ನಡೆಸಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಬಳಿಯ ಮಹಾತ್ಮಗಾಂಧಿ ಪುತ್ಥಳಿ ಬಳಿ ಮಂಗಳವಾರ ಮೌನ ಸತ್ಯಾಗ್ರಹ ನಡೆಸಿ ಕೇಂದ್ರ ಸರಕಾರದ ಧೋರಣೆಯನ್ನು ಖಂಡಿಸಿದರು.
ರಾಯಚೂರು ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ಈ ಧರಣಿಯಲ್ಲಿ ಕೆಪಿಸಿಸಿ ಪ್ರ.ಕಾರ್ಯದರ್ಶಿ ಎ.ವಸಂತಕುಮಾರ,ಪಾರಸಮಲ್ ಸುಖಾಣಿ, ನಗರಾಧ್ಯಕ್ಷ ಬಸವರಾಜರೆಡ್ಡಿ, ಗ್ರಾಮೀಣಾಧ್ಯಕ್ಷ ಮಲ್ಲಿಕಾರ್ಜುನ ಗೌಡ, ಕೆ.ಶಾಂತಪ್ಪ, ರಾಜಶೇಖರ ನಾಯಕ, ಮೊಹಮದ್ ಶಾಲಂ, ತಾಯಣ್ಣ ನಾಯಕ, ನಾಗವೇಣಿ ಪಾಟೀಲ, ಪದ್ಮಾವತಿ,ಶಶಿಕಲಾ, ನಿರ್ಮಲಾಬೆಣ್ಣಿ, ಅಮರೇಗೌಡ, ರಾಣಿರಿಚರ್ಡ್,ನಾಗೇಂದ್ರಪ್ಪ ಮಟಮಾರಿ, ಎಪಿಎಂಸಿ ಉಪಾಧ್ಯಕ್ಷ ಬಷೀರ್ , ಚನ್ನಬಸವ ಸೇರಿದಂತೆ ಇತರರು ಪಾಲ್ಗೊಂಡಿದ್ದರು.