ಸುದ್ದಿಮೂಲ ವಾರ್ತೆ
ತಿಪಟೂರು: ಲಿಂಗೋದ್ಭವ ಆದಿ ಜಗದ್ಗುರು ರೇಣುಕಾಚಾರ್ಯರ ಸ್ಥಾಪಿತ ಪಂಚಪೀಠಗಳ ವೀರಶೈವ ಧರ್ಮವು ಸಂಸ್ಕೃತಿ, ಸಾಹಿತ್ಯ, ಶಾಂತಿ ಸಮೃದ್ಧಿ ಸರ್ವರಿಗೂ ಆಗಲಿ ಎಂದು ಶ್ರಮಿಸಿವೆ, ಪ್ರಸಕ್ತ ವೈಜ್ಞಾನಿಕ ಆಧುನಿಕತೆಯಲ್ಲಿ ಧರ್ಮ ಉಳಿವಿಗೆ ಧರ್ಮಾಭಿಮಾನಿಗಳು ಪ್ರಯತ್ನಿಸ ಬೇಕಿದೆ ಕುಟುಂಬದಲ್ಲಿ ಆಚಾರ, ವಿಚಾರ, ದೈವ ಭಕ್ತಿ ಗುರು ಹಿರಿಯರ ಬಗ್ಗೆ ಹಿರಿಯರಿಂದ ಬೋಧನೆ ಅವಶ್ಯಕತೆ ಇದೆ ಎಂದು ಬಾಳೆಹೊನ್ನೂರು ಪೀಠದ ವೀರ ಸೋಮೇಶ್ವರ ಜಗದ್ಗುರುಗಳು ಭಕ್ತಾದಿಗಳಿಗೆ ಆಶೀರ್ವದಿಸಿದರು.
ನಗರದ ಗುರು ಲೀಲಾ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಇಷ್ಟಲಿಂಗ ಪೂಜೆ ಧರ್ಮ ಜಾಗೃತಿ ಸಭೆಯ ಮೊದಲ ದಿನ ಆದಿ ಜಗದ್ಗುರು ರೇಣುಕಾಚಾರ್ಯರ ಮಂಗಳಮೂರ್ತಿಗೆ ರುದ್ರಾಭಿಷೇಕ ಇಷ್ಟಲಿಂಗ ಪೂಜೆ ನೆರವೇರಿಸಿ ನೆರೆದಿದ್ದ ಸಾವಿರಾರು ಭಕ್ತರನ್ನು ಉದ್ದೇಶಿಸಿ ಆಶೀರ್ವದಿಸುತ್ತಾ ದೇಶದಲ್ಲಿ ಧರ್ಮದ ಉಳಿವಿಗಾಗಿ ಪಂಚಪೀಠಗಳು ಧರ್ಮಪ್ರಚಾರದ ಮೂಲಕ ಪ್ರಯತ್ನಿಸಿವೆ ಕೇಳಿದ್ದನ್ನು ನೀಡುವ ಕಲ್ಪತರು ನಾಡು ತಿಪಟೂರು ದಾನ, ಧರ್ಮ, ಗುರು ಹಿರಿಯರ ಭಕ್ತಿ ಧರ್ಮ ಕೈಂಕರ್ಯ ಸೇವೆಗೆ ಪ್ರಸಿದ್ಧಿ ಪಡೆದ ಕಲ್ಪತರು ನಾಡಿಗೂ ವೀರ ಗಂಗಾಧರೇಶ್ವರ ಜಗದ್ಗುರುಗಳಿಗೆ ಅವಿನಾಭಾವ ಸಂಬಂಧ ಗುರು ಶಿಷ್ಯರ ಪರಂಪರೆ ಅಂದಿನ ಕಾಲದಿಂದಲೂ ಮುಂದುವರೆದು ಬಂದಿದೆ ಈಗಲೂ ಸಹ ಜಗದ್ಗುರುಗಳಿಗೂ ಭಕ್ತಾದಿಗಳಿಗೂ ಮುಂದುವರೆದಿದೆ ರೇಣುಕಾಚಾರ್ಯ ಮಂಗಳ ಮಂದಿರದ ಹಿಂಭಾಗದಲ್ಲಿ ಸಾರ್ವಜನಿಕರು ಹಾಗೂ ಭಕ್ತರ ಅನುಕೂಲಕ್ಕಾಗಿ ಬೃಹತ್ ಸಮುದಾಯ ಭವನದ ಕಾರ್ಯ ಪ್ರಗತಿಯಲ್ಲಿ ಸಾಗುತ್ತಿದ್ದು ದಾನಿಗಳ ನೆರವು ಅವಶ್ಯಕವಾಗಿದೆ ಉಚಿತವಾಗಿ ನಿವೇಶನ ನೀಡಿದ ಕೊಡುಗೈ ಸಾಸಲು ಮರುಳ ಸಿದ್ದಪ್ಪನವರ ಸೇವೆ ಜಗದ್ಗುರುಗಳಿಗೆ ಅತಿವ ಸಂತೋಷವನ್ನುಂಟು ಮಾಡಿದೆ, ಬಾಳೆಹೊನ್ನೂರಿನಲ್ಲಿ ಬೃಹತ್ ಗಾತ್ರದ ರೇಣುಕಾಚಾರ್ಯರ ಲಿಂಗೋದ್ಭವ ಶಿಲಾಮೂರ್ತಿ ಬರುವ ಮಾರ್ಚ್ ತಿಂಗಳಿಗೆ ಭಕ್ತರ ಸಹಕಾರದೊಂದಿಗೆ ಲೋಕಾರ್ಪಣೆಗೊಳ್ಳಲಿದೆ ಮೂರು ದಿನದ ಜಗದ್ಗುರುಗಳ ಇಷ್ಟಲಿಂಗ ಪೂಜೆ ಸಂಘಟಕರಿಗೆ, ಸೇವಾ ನಿರತ ಭಕ್ತರಿಗೆ ಜಗದ್ಗುರು ರೇಣುಕಾಚಾರ್ಯರ ಆಶೀರ್ವಾದವಿರಲಿ ಎಂದು ಆಶೀರ್ವಾದವಿತ್ತರು, ಪೂಜಾ ಕಾರ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು ಪ್ರಸಾದ ವ್ಯವಸ್ಥೆ ನೆರವೇರಿತು.