ಸುದ್ದಿಮೂಲ ವಾರ್ತೆ
ಮೈಸೂರು, ಜು.13 : ರಾಜ್ಯದಲ್ಲಿ ಮಳೆ -ಬೆಳೆಗಾಗಿ ಪ್ರಾರ್ಥಿಸಿ ಕಂಸಾಳೆ ಬಾರಿಸುತ್ತಾ ಶ್ರೀ ಮಹದೇಶ್ವರನ ಪದ ಹಾಡುತ್ತಾ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ 120 ಮಂದಿ ಪಾದಯಾತ್ರೆಗೆ ತೆರಳಿದ್ದಾರೆ.
ಮೈಸೂರು ತಾಲೂಕು ರಾಯನ ಹುಂಡಿ ಗ್ರಾಮದಿಂದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರ ಬೆಟ್ಟಕ್ಕೆ ಬರೋಬ್ಬರಿ 120 ಜನರ ತಂಡ ಕಂಸಾಳೆ ಬಾರಿಸುತ್ತಾ ಮಹದೇಶ್ವರನ ಪದ ಹಾಡುತ್ತ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ.
ಹಿರಿಯರು, ಯುವಕರು ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನ ಭಾಗಿಯಾಗಿದ್ದಾರೆ. ಸತತ 22 ವರ್ಷಗಳಿಂದ ಈ ತಂಡ ಪಾದಯಾತ್ರೆ ಮಾಡುತ್ತಿದ್ದಾರೆ. ನರಸೀಪುರ ಕೊಳ್ಳೇಗಾಲ ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ಸುಮಾರು 100 ಕಿಲೋ ಮೀಟರ್ ಪಾದಯಾತ್ರೆ ನಡೆಸಲಿದ್ದಾರೆ.