ಸುದ್ದಿಮೂಲ ವಾರ್ತೆ
ಮೈಸೂರು, ಜು.13 : ಸೆಕ್ಯೊರಿಟಿ ಏಜೆನ್ಸಿ ಕುರಿತು ಮಾಹಿತಿ ನೀಡಬೇಕೆಂಬ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರ ನಡುವೆ ಗದ್ದಲ ಏರ್ಪಟ್ಟ ಘಟನೆ ಗುರುವಾರ ನಡೆದ ಮಹಾನಗರ ಪಾಲಿಕೆ ಜುಲೈ ತಿಂಗಳ ಕೌನ್ಸಿಲ್ ಸಭೆಯಲ್ಲಿ ನಡೆಯಿತು.
ಪಾಲಿಕೆಯ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ, ಸೆಕ್ಯೂರಿಟಿ ಏಜೆನ್ಸಿ ಕುರಿತು ಮಾಹಿತಿ ನೀಡುವಂತೆ ಜೆಡಿಎಸ್ ಸದಸ್ಯ ಎಸ್ ಬಿ ಎಂ ಮಂಜು ಮತ್ತಿತರ ಸದಸ್ಯರು ಒತ್ತಾಯ ಮಾಡಿದರು. ಅಲ್ಲದೆ, ಟವರ್ ವಿಚಾರವಾಗಿ ಪಾಲಿಕೆಗೆ ಸಾಕಷ್ಟು ಹಣ ಬರಬೇಕು ಅದನ್ನು ವಸೂಲಿ ಮಾಡಿ ಅವ್ರಿಗೆ ಕೊಟ್ಟಿರುವ ಟೆಂಡರ್ ಮುಗಿದಿದೆ. ಯಾರೋ ದುಡ್ಡು ಮಾಡಲು ನಮ್ಮ ಪಾಲಿಕೆ ಬಲಿಯಾಗಬಾರದು ಎಂದು ಟೀಕಾ ಪ್ರಹಾರ ನಡೆಸಿದರು.
ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಸದಸ್ಯರ ನಡುವೆ ಮಾತಿನ ಸಮರ ನಡೆದು ಕೆಲ ಹೊತ್ತು ಗದ್ದಲ ನಡೆಯುತು. ಕೊನೆಗೆ ಮೇಯರ್ ಅವರು, ಸದ್ಯದಲ್ಲಿ ಎಲ್ಲಾ ವಿವರಗಳನ್ನು ನೀಡಲಾಗುವುದು ಎಂದು ಅಭಯ ನೀಡಿದ ನಂತರ ವಾತಾವರಣ ತಿಳಿಯಾಯಿತು.
ಸಭೆಯಲ್ಲಿ ಉಪಮೇಯರ್ ರೂಪ,ಪಾಲಿಕೆ ಆಯುಕ್ತ ಲಕ್ಷ್ಮಿ ಕಾಂತ್ ರೆಡ್ಡಿ ಸೇರಿದಂತೆ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.