ಸುದ್ದಿಮೂಲ ವಾರ್ತೆ
ಕೋಲ್ಕತ್ತಾ, ಜು 14 : ಕೋಲ್ಕತ್ತಾದಲ್ಲಿ ನಡೆದ ಟಿಟಿಎಫ್ ರಾಷ್ಟ್ರೀಯ ಪ್ರವಾಸೋದ್ಯಮ ಮೇಳದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಸಂಸ್ಥೆ ಭಾಗವಹಿಸಿತ್ತು.
ಕೋಲ್ಕತ್ತಾದಲ್ಲಿ 3 ದಿನಗಳವರೆಗೆ ನಡೆಯುವ ಟಿ ಟಿ ಎಫ್ ರಾಷ್ಟ್ರೀಯ ಪ್ರವಾಸೋಧ್ಯಮ ಮೇಳದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪೆವಿಲಿಯನ್ ವನ್ನು ಪಶ್ಚಿಮ ಬಂಗಾಳ ರಾಜ್ಯದ ಪ್ರವಾಸೋದ್ಯಮ ಸಚಿವ ಬಾಬುಲ್ ಸುಪ್ರಿಯೋ ಉದ್ಘಾಟಿಸಿದರು.
ಪಶ್ಚಿಮ ಬಂಗಾಳ ರಾಜ್ಯದ ಪ್ರವಾಸೋದ್ಯಮ ಸಚಿವ ಬಾಬುಲ್ ಸುಪ್ರಿಯೋ ರವರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಧಾನ ವ್ಯಾವಸ್ಥಾಪಕರಾದ ಇಂದಿರಮ್ಮ , ವ್ಯವಸ್ಥಪಾಕರಾದ ಮನೋಜ್ ಕುಮಾರ್, ಮತ್ತು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಸಂಸ್ಥೆಯ ಮಂಜುನಾಥ್ ರವರು, ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದ ಬಗ್ಗೆ ಸವಿವರ ಮಾಹಿತಿ ನೀಡಿ ಸಚಿವರನ್ನು ಸನ್ಮಾನಿಸಿದರು.