ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 14 : ಅನುಮಾನಗೊಂಡ ಪತಿ ಪತ್ನಿಯನ್ನು ಕತ್ತರಿಯಿಂದ ಇರಿದು ಕೊಲೆಗೈದಿರುವ ಘಟನೆ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಳು ತಾಲೂಕಿನ ದೊಡ್ಡಸಣ್ಣೆ ಗ್ರಾಮದ ನಿವಾಸಿ ರಜನಿ (28)
ಬುಧವಾರ ರಾತ್ರಿ ಗಂಡ-ಹೆಂಡತಿಯ ಜಗಳ ವಿಕೋಪಕ್ಕೆ ತಿರುಗಿ ರಜನಿ ಮೇಲೆ ಅನುಮಾನಗೊಂಡ ಪತಿ ಮುನಿ ಆಂಜಿನಪ್ಪ ಕತ್ತರಿಯಿಂದ ಪತ್ನಿಯನ್ನು ಇರಿದಿದ್ದಾನೆ. ಗಾಯಗೊಂಡ ಮಹಿಳೆ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ರಜನಿ ಸಾವನ್ನಪ್ಪಿದ್ದಾಳೆ. ಕೊಲೆಗೈದ ಮುನಿ ಆಂಜಿನಪ್ಪನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.