ಸುದ್ದಿಮೂಲವಾರ್ತೆ
ಕೊಪ್ಪಳ ಜು 15:ಕೊಪ್ಪಳ : ನಗರಸಭೆ ಪಕ್ಕದಲ್ಲಿರುವ ನಗರಸಭೆ ಮಳಿಗೆಯೊಂದರಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡು ದಾಖಲೆಗಳು ಭಸ್ಮವಾದ ಘಟನೆ ನಡೆದಿದೆ.
ವಿದ್ಯುತ್ ಕಾಮಗಾರಿ ಗುತ್ತಿಗೆದಾರ ಮೌಲಾಸಾಬ ಬನ್ನಿಕೊಪ್ಪ ಎಂಬ ನಗರಸಭೆಯ ವಿದ್ಯುತ್ ಗುತ್ತಿಗೆದಾರರ ಕಚೇರಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು.
ಬೆಳಿಗ್ಗೆ ಮಳಿಗೆಯಿಂದ ಹೊಗೆ ಬರುತ್ತಿರುವ ದೃಶ್ಯ ಕಂಡು ಸಾರ್ವಜನಿಕರು ಗುತ್ತಿಗೆದಾರ ಹಾಗು ನಗರಸಭೆಯ ಗಮನಕ್ಕೆ ತರಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಮಳಿಗೆಯ ಈ ಕಚೇರಿಯ ಚಾವಿ ಮುರಿದು ಪಕ್ಕದಲ್ಲಿ ಎಸೆದಿರುವುದು ಕಂಡು ಬಂದಿದ್ದು ಇದು ಯಾರೋ ಬೆಂಕಿ ಹಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.