ಸುದ್ದಿಮೂಲ ವಾರ್ತೆ
ಮೈಸೂರು, ಜು.15 : ಇದೀಗ ರಾಜ್ಯ ಹೆಮ್ಷೆಯ, ಹಿರಿಮೆಯ ನಂದಿನಿ ಹಾಲು ತಮಿಳುನಾಡಿನಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ.
ಪ್ರತಿದಿನ ಅಲ್ಲಿ 45 ಸಾವಿರ ಲೀಟರ್ಗಿಂತ ಅಧಿಕ ಹಾಲು ಮಾರಾಟವಾಗುತ್ತಿದ್ದು, ಮೈಸೂರಿನ ಹಾಲು ಒಕ್ಕೂಟ ಹಾಲನ್ನು ತಮಿಳುನಾಡಿಗೆ ಸರಬರಾಜು ಮಾಡುವ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ.
ನಂದಿನಿ ಹಾಲನ್ನು ಮಾರಾಟ ಮಾಡುತ್ತಿರುವ ಚನ್ನೈನ ಜಲ್ಲಿಕಟ್ಟು ಸಂಸ್ಥೆಗೆ ಒಕ್ಕೂಟ ಆಡಳಿತ ಮಂಡಳಿ ಅಧ್ಯಕ್ಷ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ನಿರ್ದೇಶಕರ ಭೇಟಿ ನೀಡಿ, ಇನ್ನೂ ಹೆಚ್ಚಿನ ಮಾರಾಟಕ್ಕೆ ಪ್ರೋತ್ಸಾಹಿಸಲಾಯಿತು.
ನಿರ್ದೇಶಕರಾದ ಕೆ. ಉಮಾಶಂಕರ್, ಈರೇಗೌಡ, ಅಂಕನಹಳ್ಳಿ ಶೇಖರ್, ಲೀಲಾ ನಾಗರಾಜಪ್ಪ ,ಶಿವಗಾಮಿ, ಜಿಎಂ ಜಯಶೇಖರ್, ಮಾರುಕಟ್ಟೆ ಅಧಿಕಾರಿ ಅರುಣ್ ಇದ್ದರು.