ಸುದ್ದಿಮೂಲ ವಾರ್ತೆ
ತಿಪಟೂರು, ಜು.16: ಬದುಕು ಸಾಂತ್ವನ ಮತ್ತು ಮಕ್ಕಳ ಸಹಾಯವಾಣಿಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ತಿಪಟೂರು ತಾಲ್ಲೂಕಿನ 36 ವಿದ್ಯಾರ್ಥಿಗಳಿಗೆ ಉಚಿತವಾಗಿ ಗೌರಮ್ಮ ಟ್ರಸ್ಟ್ ಸಹಯೋಗದಲ್ಲಿ ಶಾಲಾ ಬ್ಯಾಗ್, ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ನಗರದ ಸರ್ಕಾರಿ ನೌಕರರ ಸಂಘದಲ್ಲಿ ಬದುಕು ಮತ್ತು ಗೌರಮ್ಮ ಟ್ರಸ್ಟ್ ಇವರುಗಳ ಸಹಯೋಗದಲ್ಲಿ ಏಕ ಪೋಷಕ ಮತ್ತು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತಾನಾಡಿದ ಬದುಕು ಸಂಸ್ಥೆ ನಿರ್ದೇಶಕ ಬಿ.ಎಸ್. ನಂದಕುಮಾರ್ ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಕ್ಯೆಹಿಡಿದು ಮೇಲೆತ್ತುವುದು, ನಮ್ಮ ದುಡಿಮೆಯ ಸ್ವಲ್ಪ
ಭಾಗವನ್ನು ಸಮಾಜಕ್ಕೆ ನೀಡುವುದು ನಮ್ಮೆಲ್ಲರ ಜವಬ್ದಾರಿ. ಈ ನಿಟ್ಟಿನಲ್ಲಿ ಗೌರಮ್ಮ ಟ್ರಸ್ಟ್ ಸಹಕಾರದೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಸಮಾಜದ ಉಳ್ಳವರು ಕ್ಯೆ ಜೋಡಿಸಬೇಕು ಎಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಡಾ: ತಾರಾದೇವಿ ಮಾತಾನಾಡಿ ಶಿಕ್ಷಣದಲ್ಲಿ ಹೆಚ್ಚು ಸಾಧನೆ ಮಾಡಿದವರಿಗೆ ಇನ್ನೂ ಹೆಚ್ಚಿನ ಸಹಕಾರ ನೀಡಲು ನಮ್ಮ ಟ್ರಸ್ಟ್ ಸಿದ್ದವಿದೆ ಬದುಕು ಸಂಸ್ಥೆಯ ಮೂಲಕ ಇನ್ನೂ ಮಕ್ಕಳಿಗೆ ಪ್ರೋತ್ಸಾಹದಾಯಿಕ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಇಓ ಮನಮೋಹನ್ ಮಾತಾನಾಡಿ, ಕಟ್ಟಕಡೆಯ ಮಗುವಿಗೆ ಶಿಕ್ಷಣದ ಖಾತರಿ ಪಡಿಸಲು ಬದುಕು ಸಂಸ್ಥೆ ಕೆಲಸ ಶ್ಲಾಘನೀಯ ಎಂದರು.
ಸರ್ಕಾರಿ ನೌಕರರ ಸಂಘ ತಿಪಟೂರು ತಾಲ್ಲೂಕು ಅಧ್ಯಕ್ಷ ರಮೇಶ್ ಮಾತನಾಡಿ, ಬದುಕು ಸಂಸ್ಥೆಯ ಕೆಲಸಕ್ಕೆ ನಾನು ಸಹಕಾರ ನೀಡಿ ಮಕ್ಕಳಿಗೆ ನೆರವಾಗುತ್ತೇನೆ ಎಂದು ವಾಗ್ದಾನ ಮಾಡಿದರು.
ಎಸಿಡಿಪಿಓ ನಾಗರಾಜ್ ಮಾತಾನಾಡಿ ಮಕ್ಕಳ ಶಿಕ್ಷಣದ ಮಹತ್ವ ಮತ್ತು ಪೋಷಕರ ಪಾಲನೆ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಡಾ: ಜಗದೀಶ್, ಶಿಕ್ಷಣ ಇಲಾಖೆಯ ಪಟ್ಟಾಬಿ ರಾಮು, ನಾಗರಾಜು ಹಾಜರಿದ್ದೂ ಮಕ್ಕಳ ಬೆಳೆಸುವಲ್ಲಿ ಪೋಷಕರ ಪಾತ್ರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಬದುಕು ಸಂಸ್ಥೆಯ ಸಿಬ್ಬಂದಿಗಳಾದ ನಾಗವೇಣಿ, ಪ್ರಿಯಾಂಕ, ಅನುಆಗಸ್ಟೀನ್, ಮೋಹನ್ಕುಮಾರ್ ಹಾಜರಿದ್ದರು.