ಸುದ್ದಿಮೂಲವಾರ್ತೆ
ಕೊಪ್ಪಳ ಜು 17; ಮುಂಜಾನೆ ಎಂದಿನಂತೆ ಕಾಲೇಜಿಗೆ ಹೋಗುತ್ತೀನಿ ಎಂದು ಹೇಳಿ ಕೊಪ್ಪಳಕ್ಕೆ ಬಂದ ಕಾಲೇಜು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಪಂಡ ಹೊಡೆಯುತ್ತಾರೆ. ಈ ಮಾಹಿತಿ ತಿಳಿದ ಕೊಪ್ಪಳ ನಗರಠಾಣೆ ಪೊಲೀಸರು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕೊಪ್ಪಳದಲ್ಲಿರುವ ವಿವಿಧ ವಿದ್ಯಾರ್ಥಿಗಳು ನಿತ್ಯ ಬೆಳಗಿನ ಜಾವ ತಂದೆ ತಾಯಿಗಳಿಗೆ ನಾವು ಕಾಲೇಜಿಗೆ ಹೋಗುತ್ತಿವಿ ಎಂದು ಬಸ್ ಹತ್ತಿ ಬರುತ್ತಾರೆ. ತಂದೆ ತಾಯಿಗಳು ನಮ್ಮ ಮಗ ಕೊಪ್ಪಳದಾಗ ಕಾಲೇಜು ಓದಾಕ ಹೋಗುತ್ತಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುತ್ತಾರೆ. ಆದ್ರೆ ಅವರಿಗೇನು ಗೊತ್ತು ಕಾಲೇಜಿಗೆ ಹೋಕ್ಕಿನಿ ಎಂದು ಹೇಳಿ ಹೋದವ ಬಸ್ ಸ್ಟಾಂಡನ್ಯಾಗ ಗೆಳೆಯರೊಂದಿಗೆ ಸುತ್ತಾಡುತ್ತಾನೆ ಎಂಬುವುದು. ಇದನ್ನು ತಡೆಗಟ್ಟಲು ಇಂದು ಕೊಪ್ಪಳ ನಗರಠಾಣೆ ಪೊಲೀಸರು ವಿದ್ಯಾರ್ಥಿಗಳಿಗೆ ಪಾಠ ಕಲಿಸಿದರು.
ಇಂದು ಮುಂಜಾನೆ ಹಿಂಗೆ ಕಾಲೇಜಿಗೆಂದು ಬಂದ ನಾಲ್ಕೈದು ವಿದ್ಯಾರ್ಥಿಗಳು ಬಸ್ ಸ್ಟಾಂಡಿನಲ್ಲಿ ಟೈಂ ಪಾಸ್ ಮಾಡುತ್ತಿದ್ದರು. ನಗರಠಾಣೆ ಎಎಸ್ಐ ಹಾಗು ಪೊಲೀಸರು ಇಂಥ ವಿದ್ಯಾರ್ಥಿಗಳು ಯಾವ ಕಾಲೇಜು. ಯಾವ ಊರು ಎಂದು ವಿಚಾರ ಮಾಡಿ ಅವರ ಪಾಲಕರ ಫೋನು ನಂಬರ್ ಪಡೆದು ಪಾಲಕರಿಗೆ ಮಾಹಿತಿ ನೀಡಿದರು. ಹಾಗೆಯೆ ಕಾಲೇಜು ಪ್ರಾಚಾರ್ಯರಿಗೂ ಮಾಹಿತಿ ನೀಡಿದರು.
ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಒಂದಿಷ್ಟು ಯುವಕರು ಯಾವುದೇ ಕೆಲಸವಿಲ್ಲದೆ ತಿರುಗಾಡುತ್ತಿರುವದನ್ನು ತಡೆಯುವ ಉದ್ದೇಶದಿಂದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರಿಂದಾಗಿ ಆದರೂ ಕಾಲೇಜಿಗೆ ಬಂಕ್ ಮಾಡಿ ತಿರುಗಾಡುವವರ ನಿಯಂತ್ರಣವಾಗುತ್ತಾ ಕಾದು ನೋಡಬೇಕು.