ಸುದ್ದಿಮೂಲವಾರ್ತೆ
ಕೊಪ್ಪಳ ಜು 18: ಜಮಾಅತೆ ಇಸ್ಲಾಮೀ ಹಿಂದ್ ಕೊಪ್ಪಳ ಘಟಕದ ಅಂಗಸಂಸ್ಥೆ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಷನ್ ವತಿಯಿಂದ ಅಸರಿ ಶಿಕ್ಷಣ ಜೊತೆಯಲ್ಲಿ ಧಾರ್ಮಿಕ ಅರಿವು ಮೂಡಿಸುವ ಪರೀಕ್ಷೆಯ ಫಲಿತಾಂಶ ಮತ್ತು ಪ್ರಶಸ್ತಿ ಪತ್ರ ವಿತರಣಾ ಸಮಾರಂಭವು ಕೊಪ್ಪಳದ ಮಸ್ಜಿದ್ ಎ ಆಲಾ ನಲ್ಲಿ ನಡೆಯಿತು.
ಮೌಲಾನಾ ಅನ್ವರ್ ಪಾಷಾ ಉಮರಿ ಅವರ ಕುರಾನ್ ಪ್ರವಚನ ಮೂಲಕ ಕಾರ್ಯಕ್ರಮ ಕ್ಕ ಚಾಲನೆ ನೀಡಿದರು, ಅಜ್ ಗರ್ ಖಾನ್ ಸಾಬ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್ ಆಯ್ ಒ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಪೀರ್ ಲಾಟಗೆರಿ ಅವರು ಪ್ರಸಕ್ತ ವರ್ಷ ಗಳಲ್ಲಿ ವಿದ್ಯಾರ್ಥಿಗಳು ಡಿಜಿಟಲ್ ಜಗತ್ತು ನಲ್ಲಿ ಮತ್ತು ಹಲವಾರು ದುಶ್ಚಟಗಳು ಮುಳಿಗಿದವು ನಮಗೆ ನಮ್ಮ ಜವಾಬ್ದಾರಿ ಯ ಅರಿವನ್ನು ಮೂಡಿಸುವ ಮೂಲಕ ಎಸ್ ಅಯ್ ಒ ನ ಕಾರ್ಯಚಟುವಟಿಕೆಗಳ ಬಗ್ಗೆ ಪರಿಚಯ ಮಾಡಿದರು.
ಮುಖ್ಯ ಅತಿಥಿಗಳು ಶಾಹಿದ್ ತಹಸೀಲ್ದಾರ್,ಹಾಗೂ ಜನಾಬ್ ಜಮೀರ್ ಖಾದ್ರಿ ,ಸಬೀಹಾ ಸುಲ್ತಾನ ಹಾಗೂ ಅನೀಸ್ ಫಾತಿಮಾ ವಿದ್ಯಾರ್ಥಿ ಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಿ ,ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು ಜನಾಬ್ ಕಲೀಮುಲ್ಲ ಖಾನ್ ಸಾಬ್ ರವರು ಕಾರ್ಯಕ್ರಮ ಗೆ ನಿರೂಪಿಸಿದರು .