ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 18 : ಶಾಂತಿನಗರದಲ್ಲಿರುವ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು.
ವಿವಿಧ ಭಾಗಗಳಿಂದ 28 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಪಂದ್ಯಾವಳಿಗೆ ಚಾಲನೆ ನೀಡಿದ ಜೆಸಿಐ ಸಂಸ್ಥೆಯ ವಲಯ ಅಧ್ಯಕ್ಷೆ ಯಶಸ್ವಿನಿ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕ್ರೀಡೆಯನ್ನು ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಇದರಿಂದ ಆರೋಗ್ಯಕರ ಜೀವನ ನಡೆಸಬಹುದು ಎಂದು ಹೇಳಿದರು.
ಜೆಸಿಐ ಸಂಸ್ಥೆಯ ದೇವನಹಳ್ಳಿ ಅಧ್ಯಕ್ಷ ಡಿ.ಎಂ.ವೇಣುಗೋಪಾಲ್ ಮಾತನಾಡಿ, ಸಂಸ್ಥೆಯೂ ಪ್ರತಿಯೊಬ್ಬ ವ್ಯಕ್ತಿತ್ವ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ದೈಹಿಕ ಆರೋಗ್ಯ ಮತ್ತು ಮನರಂಜನೆಯ ಭಾಗವಾಗಿ ಕ್ರೀಡಾ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ದೇವನಹಳ್ಳಿಯ ವೇಣುಗೋಪಾಲ್ ಮತ್ತು ಮಂಜುನಾಥ್ ಮೊದಲ ಸ್ಥಾನ ಹಾಗೂ ಮೈಸೂರಿನ ವರುಣ್ ತಂಡ ದ್ವಿತೀಯ ಸ್ಥಾನ ಪಡೆದರು. ಧನಂಜಯ್ ಹಾಗೂ ಅಂಬರೀಶ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಪುರಸಭೆಯ ಮಾಜಿ ಸದಸ್ಯ ಎಸ್.ಆರ್.ರವಿ, ಜೆಸಿಐ ಸಂಸ್ಥೆಯ ಪದಾಧಿಕಾರಿಗಳಾದ ಪ್ರಶಾಂತ್.ಕೆ,ಡಿ, ಸುರೇಶ್, ಪ್ರವೀಣ್, ಜಿ.ಎ.ರವೀಂದ್ರ, ನರಸಿಂಹಮೂರ್ತಿ, ಡಿ.ನಾರಾಯಣಸ್ವಾಮಿ, ಅಮರ್ ಪಿ ಬಾಣವಾರ, ಸಿದ್ದಪ್ಪ, ಸತೀಶ್, ವಾಸು, ಶಿವಕುಮಾರ್, ಶ್ರೀವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದ ಅಧ್ಯಕ್ಷ ನಂಜಪ್ಪಇದ್ದರು.