ಸುದ್ದಿಮೂಲ ವಾರ್ತೆ
ಬೆಂಗಳೂರು,ಜು.19: ಸೋನಿ ಇಂಡಿಯಾವು ಬೆಂಗಳೂರಿನಲ್ಲಿರುವ ತನ್ನ ಸೇವಾ ಕೇಂದ್ರವನ್ನು ಮೇಲ್ದರ್ಜೇಗೇರಿಸಿದ್ದು, “ಆಲ್ಫಾ ಕ್ಯಾಮೆರಾ ಬಾಡಿ ರಿಪೇರಿ ಕೇಂದ್ರ” ಹೆಸರಿನ ಈ ಸೆಂಟರ್, ಕ್ಯಾಮೆರಾ ಬಾಡಿ ಮತ್ತು ಲೆನ್ಸ್ಗಳಿಗಾಗಿ ಅತ್ಯುತ್ತಮ ದರ್ಜೆಯ ಗ್ರಾಹಕ ಸೇವೆ ಒದಗಿಸಲಿದೆ ಎಂದು ಅದು ಘೋಷಿಸಿದೆ. ಚಂಡೀಗಢದಲ್ಲಿ ಈ ಆಲ್ಫಾ ಸೇವಾ ಕೇಂದ್ರವನ್ನು ನವೀಕರಿಸುವುದರೊಂದಿಗೆ, ಸೋನಿ ಈಗ ದೆಹಲಿ, ಗಾಜಿಯಾಬಾದ್, ಜೈಪುರ, ಲೂಧಿಯಾನ, ಚಂಡೀಗಢ, ಚೆನ್ನೈ, ಕೊಯಮತ್ತೂರು, ಕೊಚ್ಚಿನ್, ತಿರುವನಂತಪುರ, ಕೋಝಿಕ್ಕೋಡ್, ಹೈದರಾಬಾದ್, ವಿಜಯವಾಡ, ಮುಂಬೈ, ಅಹಮದಾಬಾದ್, ಪುಣೆ, ನಾಗ್ಪುರ, ಇಂದೋರ್, ಕೋಲ್ಕತ್ತಾ, ಗುವಾಹಟಿ, ಭುವನೇಶ್ವರ ಮತ್ತು ಬೆಂಗಳೂರು ಸೇರಿದಂತೆ ಭಾರತದ 22 ನಗರಗಳಲ್ಲಿ ತನ್ನ ಹೆಜ್ಜೆಗುರುತು ವಿಸ್ತರಿಸಿದೆ.
ಸೋನಿ ಇಂಡಿಯಾದ ಗ್ರಾಹಕ ಸೇವೆಗಳ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ವಿಶಾಲ್ ಮಾಥುರ್ ಮಾತನಾಡಿ, “ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡಲು ನಾವು ಯಾವಾಗಲೂ ಶ್ರಮಿಸುತ್ತಿದ್ದೇವೆ. ಇದು ಭಾರತದಾದ್ಯಂತ ನಮ್ಮ ಸೇವಾ ಜಾಲ ವಿಸ್ತರಿಸಲು ನಮಗೆ ಕಾರಣವಾಗಿದೆ. ಆಲ್ಫಾ ಕ್ಯಾಮೆರಾ ಬಾಡಿ ಮತ್ತು ಲೆನ್ಸ್ ರಿಪೇರಿ ಸೌಲಭ್ಯಗಳ ವಿಸ್ತರಣೆಯು ಗ್ರಾಹಕರ ತೃಪ್ತಿಗಾಗಿ ಬ್ರ್ಯಾಂಡ್ ನೀಡುತ್ತಾ ಬಂದಿರುವ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದರು..
ಸೋನಿ ಇಂಡಿಯಾ ಈಗ ಡಿಜಿಟಲ್ ಇಮೇಜಿಂಗ್ ಉತ್ಪನ್ನಗಳಿಗೆ ‘ಮಾರಾಟ ನಂತರದ ಬೆಂಬಲ ಒದಗಿಸುವ ವ್ಯಾಪಕ ಸೇವಾ ಜಾಲ’ ಹೊಂದಿದೆ. ಜತೆಗೆ ಲೆನ್ಸ್ ರಿಪೇರಿಗಾಗಿ 8 ಸೇವಾ ಕೇಂದ್ರಗಳು, 22 ನಗರಗಳಲ್ಲಿ ಆಲ್ಫಾ ಕ್ಯಾಮೆರಾ ಬಾಡಿ ರಿಪೇರಿಯ 25 ಸೇವಾ ಕೇಂದ್ರಗಳು, ಸಿಸಿಡಿ ಇಮೇಜರ್ ಕ್ಲೀನಿಂಗ್ ಮತ್ತು ಫರ್ಮ್ವೇರ್ ಅಪ್ಡೇಟ್ಗಳಿಗಾಗಿ 40+ ಸೇವಾ ಕೇಂದ್ರಗಳು ಮೂಲಭೂತ ಸೇವೆಗಳನ್ನು ಒದಗಿಸುತ್ತಿವೆ. ಜತೆಗೆ, 220+ ಪ್ಯಾನ್ ಇಂಡಿಯಾ ಸಂಗ್ರಹ ಕೇಂದ್ರಗಳು ಸೇವೆ ಒದಗಿಸುತ್ತಿವೆ ಎಂದರು.
ಸೋನಿ ಇಂಡಿಯಾದ ಡಿಜಿಟಲ್ ಇಮೇಜಿಂಗ್ ಬ್ಯುಸಿನೆಸ್ ವಿಭಾಗದ ಮುಖ್ಯಸ್ಥ ಮುಖೇಶ್ ಶ್ರೀವಾಸ್ತವ ಮಾತನಾಡಿ, “ಸ್ಥಳೀಯ ಮಾರುಕಟ್ಟೆಗಳಲ್ಲಿ ಪಾಲುದಾರರನ್ನು ಬೆಂಬಲಿಸುವ ಮತ್ತು ಸಹಾಯ ಮಾಡುವ ಮೂಲಕ, ದೇಶಾದ್ಯಂತ ಎಲ್ಲಾ ಬಿಡಿ ಮಾರಾಟ ಮಳಿಗೆಗಳಲ್ಲಿ ತ್ವರಿತ ಮತ್ತು ವೇಗದ ವಹಿವಾಟಿನ ಜತೆಗೆ ಗ್ರಾಹಕರಿಗೆ ಅಸಾಧಾರಣ ಸೇವೆ ಮತ್ತು ತೃಪ್ತಿ ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಸೋನಿ ಹೊಂದಿದೆ. ಹೊಸ ಸೇವಾ ಕೇಂದ್ರಗಳು ಗ್ರಾಹಕರ ನಿರೀಕ್ಷೆಗಳನ್ನು ಮೀರಿಸುವಂತಹ ಸ್ಥಿರವಾದ ಬ್ರ್ಯಾಂಡ್ ಅನುಭವ ಒದಗಿಸಲು ಹಲವು ಟಚ್ ಪಾಯಿಂಟ್ಗಳಲ್ಲಿ ತಡೆರಹಿತ ಅನುಭವ ನೀಡುತ್ತಿವೆ ಎಂದರು.
ಆಲ್ಫಾ ಕ್ಯಾಮೆರಾ ಬಾಡಿ, ಕ್ಯಾಮೆರಾ ಲೆನ್ಸ್, ವೃತ್ತಿಪರ ಕ್ಯಾಮೆರಾಗಳು ಮತ್ತು ಡಿಜಿಟಲ್ ಸ್ಟಿಲ್ ಕ್ಯಾಮೆರಾಗಳು ಮತ್ತು ಕ್ಯಾಮ್ಕಾರ್ಡರ್ಗಳಂತಹ ಇತರೆ ಡಿಜಿಟಲ್ ಇಮೇಜಿಂಗ್ ಉತ್ಪನ್ನಗಳ ಉತ್ತಮ ಗುಣಮಟ್ಟದ ದುರಸ್ತಿ ಕೈಗೊಳ್ಳಲು ಸೇವಾ ಕೇಂದ್ರಗಳು ಅಗತ್ಯ ಜಿಗ್ಗಳು ಮತ್ತು ಸಾಧನ ಸಲಕರಣೆಗಳನ್ನು ಹೊಂದಿವೆ. ಗ್ರಾಹಕರು ತಮ್ಮ ಉತ್ಪನ್ನಗಳಿಂದ ಉತ್ತಮ ಕಾರ್ಯಕ್ಷಮತೆ ಆನಂದಿಸಲು ಸಿಸಿಡಿ ಇಮೇಜರ್ ಕ್ಲೀನಿಂಗ್ ಮತ್ತು ಇತ್ತೀಚಿನ ಫರ್ಮ್ವೇರ್ ನವೀಕರಣದಂತಹ ಮೂಲಭೂತ ಬೆಂಬಲದ ತ್ವರಿತ ಸೇವೆಗಳನ್ನು ಸಹ ಪಡೆಯಬಹುದು. ಈ ಸೇವಾ ಕೇಂದ್ರಗಳಲ್ಲಿರುವ ಗ್ರಾಹಕ-ಸ್ನೇಹಿ ಸೇವಾ ಸಿಬ್ಬಂದಿ ಗ್ರಾಹಕರಿಗೆ ತಮ್ಮ ಇನ್-ವಾರೆಂಟಿ ಉತ್ಪನ್ನಗಳನ್ನು ಸೋನಿ ಆಲ್ಫಾ ಸಮುದಾಯ ಪೋರ್ಟಲ್ನಲ್ಲಿ ನೋಂದಾಯಿಸಲು ಸಹಾಯ ಮಾಡುತ್ತದೆ. ಅನ್ವಯವಾಗುವ ಉತ್ಪನ್ನಗಳ ಮೇಲೆ ಹೆಚ್ಚುವರಿ 1 ವರ್ಷದ ಖಾತರಿಯನ್ನು ಉಚಿತವಾಗಿ ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಸೋನಿ ಇಂಡಿಯಾ ಶೀಘ್ರದಲ್ಲೇ ಈ ಸೇವಾ ಕೇಂದ್ರಗಳಲ್ಲಿ ಉಚಿತ ತಪಾಸಣೆ ಶಿಬಿರ ಆಯೋಜಿಸಲಿದೆ. ಅಲ್ಲಿ ಗ್ರಾಹಕರು ಗರಿಷ್ಠ 3 ಉತ್ಪನ್ನಗಳಿಗೆ ಸಿಸಿಡಿ ಇಮೇಜರ್ ಕ್ಲೀನಿಂಗ್ ಅನ್ನು ಪಡೆಯಬಹುದು. ಜತೆಗೆ, ಇತ್ತೀಚಿನ ಸಾಫ್ಟ್ವೇರ್ ಆವೃತ್ತಿಯನ್ನು ನವೀಕರಿಸಬಹುದು ಅಥವಾ ಅಪ್ಡೇಟ್ ಮಾಡಿಸಿಕೊಳ್ಳಬಹುದು.
ಆಲ್ಫಾ ಸೇವಾ ಕೇಂದ್ರಗಳ ವಿವರ: ಅಭಿವೃದ್ಧಿ ಟೆಕ್ 235/12, ಸೂರಜ್ ಸೆಂಟರ್, ನೆಲಮಹಡಿ, 27ನೇ ಕ್ರಾಸ್, 7ನೇ ಬ್ಲಾಕ್, ಜಯನಗರ, ಬೆಂಗಳೂರು – 560070ಫೋನ್ ನಂಬರ್: 080 – 22440123 / 22442233 Email : [email protected]