ಸುದ್ದಿಮೂಲವಾರ್ತೆ
ಕೊಪ್ಪಳ,ಜು.21; ಬುಧುವಾರದಿಂದ ಗೃಹ ಲಕ್ಷ್ನಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ. ಸರ್ವರ್ ಸಮಸ್ಯೆಯಿಂದ ಅರ್ಜಿ ಅಪಲೋಡ ಆಗುತ್ತಿಲ್ಲ.ಪರದಾಡುತ್ತಿರುವ ಫಲಾನುಭವಿಗಳು.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲೊಂದು ಗೃಹ ಲಕ್ಷ್ಮಿ ಯೋಜನೆಯು ಬುಧುವಾರದಿಂದ ಚಾಲನೆ ನೀಡಲಾಗಿದೆ. ಅರ್ಜಿ ಸಲ್ಲಿಸಲು ಫಲಾನುಭವಿಗಳು ಸರಕಾರ ನಿಗಿದಿ ಮಾಡಿದ ಸ್ಥಳಕ್ಕೆ ಹೋಗಿ ಅರ್ಜಿ ಸಲ್ಲಿಸುವ ಕಾರ್ಯ ಆರಂಭವಾಗಿದೆ. ಆದರೆ ಅರ್ಜಿ ಸಲ್ಲಿಕೆಗೆ ಸರ್ವರ್ ಸಮಸ್ಯೆಯಾಗಿದೆ.
ಈಗ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಅಪಲೋಡ ಆಗುತ್ತಿಲ್ಲ. ಬೆಳಗಿನಿಂದ ಕಾಯ್ದರು ಅರ್ಜಿ ಅಪಲೋಡ ಆಗುತ್ತಿಲ್ಲ. ಕೊಪ್ಪಳ ತಾಲೂಕಿನ ಬೆಟಗೇರಿಯಲ್ಲಿಯ ಕೇಂದ್ರಗಳಲ್ಲಿ ಕಾಯ್ದರು ಅರ್ಜಿ ಅಪಲೋಡ ಆಗುತ್ತಿಲ್ಲ.
ಗುರುವಾರದಿಂದ ಆರಂಭವಾದ ಅರ್ಜಿ ಸಲ್ಲಿಕೆಯಾಗುತ್ತಿದೆ. ಬೆಟಗೇರಿಯ ಬಾಪುಜಿ ಸೇವಾ ಕೇಂದ್ರದಲ್ಲಿ ಕೇವಲ 9 ಜನರ ಅರ್ಜಿ ಅಪಲೋಡ ಆಗುತ್ತಿಲ್ಲ. ಇಂದು ಮುಂಜಾನೆಯಿಂದ ಇಬ್ಬರ ಅರ್ಜಿ ಅಪಲೋಡ ಆಗಿದೆ. ಒಂದು ಕೇಂದ್ರದಲ್ಲಿ ನಿತ್ಯ 60 ಜನರ ಅರ್ಜಿ ಸಲ್ಲಿಕೆಯಾಗಬೇಕು. ಅರ್ಜಿ ಸಲ್ಲಿಸಲು ಫಲಾನುಭವಿಗಳಿಗೆ ಸಮಯ ನಿಗಿದಿಯಾಗಿದೆ. ಸಮಯಕ್ಕೆ ಸರಿಯಾಗಿ ಅರ್ಜಿ ಅಪಲೋಡ ಆಗದ ಹಿನ್ನೆಲೆ ಫಲಾನುಭವಿಗಳು ಫಲಾನುಭವಿಗಳು ಪರದಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ 389 ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಒಟ್ಟು 356566 ಜನ ಫಲಾನುಭವಿಗಳಿದ್ದಾರೆ. ಬಹುತೇಕ ಕಡೆ ಸರ್ವರ್ ಸಮಸ್ಯೆ ಸಕಾಲಕ್ಕೆ ಅಪಲೋಡ ಆಗದೆ ಸಮಸ್ಯೆಯಾಗಿದೆ. ನಿತ್ಯ ಸಾಕಷ್ಟು ಜನರ ಅರ್ಜಿ ವಿಳಂಬವಾಗುತ್ತಿದ್ದಯ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅರ್ಜಿ ಸಲ್ಲಿಕೆ ವಿಳಂಭವಾಗುತ್ತಿರುವುದು ಫಲಾನುಭವಿಗಳಲ್ಲಿ ಆತಂಕ ಮೂಡಿದ್ದು ಸರ್ವರ್ ಸಮಸ್ಯೆ ಬಗೆಹರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.